-->


ಮೂಲ್ಕಿ ತಾಲೂಕು ಸಮ್ಮೇಳನ: ಸಾಹಿತ್ಯ ಸ್ಪರ್ಧೆಗಳು

ಮೂಲ್ಕಿ ತಾಲೂಕು ಸಮ್ಮೇಳನ: ಸಾಹಿತ್ಯ ಸ್ಪರ್ಧೆಗಳು


ಕಿನ್ನಿಗೋಳಿ : ಮೂಲ್ಕಿ ತಾಲೂಕು ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ ಫೆಬ್ರವರಿ ೮ರ ಶನಿವಾರ ಐಕಳ ಪೊಂಪೈ ಕಾಲೇಜಿನಲ್ಲಿ ನಡೆಯಲಿದೆ. ಈ ಸಮ್ಮೇಳನದ ಸಲುವಾಗಿ ಮೂಲ್ಕಿ ತಾಲೂಕಿನ ಸಾಹಿತ್ಯಾಸಕ್ತರಿಗೆ ಸಣ್ಣ ಕಥೆ ರಚನೆ (ಎ೪ ಹಾಳೆಯಲ್ಲಿ ಒಂದು ಪುಟ), ಕವನ ರಚನೆ ಸ್ಪರ್ಧೆ (೧೨ ಸಾಲುಗಳು), ನಾನು ಓದಿದ ಉತ್ತಮ ಪುಸ್ತಕ - ಪ್ರಬಂಧ ಸ್ಪರ್ಧೆ (ಎ೪ ಹಾಳೆಯಲ್ಲಿ ಎರಡು ಪುಟ) ಆಯೋಜಿಸಲಾಗಿದೆ.
ಮೂಲ್ಕಿ ತಾಲೂಕಿನಲ್ಲಿ ವಾಸವಾಗಿರುವ, ಉದ್ಯೋಗದಲ್ಲಿರುವ ಮತ್ತು ಮೂಲತಃ ಮೂಲ್ಕಿ ತಾಲೂಕಿನವರಾಗಿ ಬೇರೆ ಕಡೆಗಳಲ್ಲಿ ಇರುವ ಸಾಹಿತ್ಯಾಸಕ್ತರು ಈ ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿದೆ. ಪ್ರತಿ ವಿಭಾಗದಲ್ಲಿ ಉತ್ತಮವಾದ ೨ ಬರಹಗಳಿಗೆ ಬಹುಮಾನ ನೀಡಲಾಗುವುದು. ಸ್ಪರ್ಧಿಗಳು  ರಘುನಾಥ್ ಕಾಮತ್, ಅಂಚೆ ಕಚೇರಿ ಕಿನ್ನಿಗೋಳಿ, ಮೂಲ್ಕಿ ತಾಲೂಕು-೫೭೪೧೫೦ ದೂರವಾಣಿ ೯೪೪೮೮೮೭೬೯೭ ಈ ವಿಳಾಸಕ್ಕೆ ೩೧-೧-೨೦೨೫ರ ಶುಕ್ರವಾರದ ಒಳಗಡೆ ತಲುಪಿಸಬೇಕು ಎಂದು ಪ್ರಕಟನೆ ತಿಳಿಸಿದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article