-->


ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ವರ್ಷಾವಧಿ ಜಾತ್ರೆ ಆರಂಭ

ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ವರ್ಷಾವಧಿ ಜಾತ್ರೆ ಆರಂಭ

ಎಕ್ಕಾರು :ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ವರ್ಷಾವಧಿ ಜಾತ್ರೆಯು ಆದಿತ್ಯವಾರದಿಂದ  ಆರಂಭಗೊಂಡು ಜ.16 ತನಕ ವಿಜೃಂಭಣೆಯಿಂದ ಜರುಗಲಿದ್ದು, ಮುಕ್ಕೋಟಿ ದ್ವಾದಶಿಯ  ಶುಭ ಮುಹೂರ್ತದಲ್ಲಿ ಕಾವರ ಮನೆಯಿಂದ  ದೈವಗಳ ಭಂಡಾರ  ಹೊರಟು  ಸಾಂಪ್ರದಾಯಿಕ ಪ್ರಕ್ರಿಯೆಗಳೊಂದಿಗೆ ಧ್ವಜ ರೋಹಣ  ನೆರವೇರುತ್ತದೆ. ಆದಿತ್ಯವಾರದಂದು   ಶ್ರೀಉಳ್ಳಾಯ ದೈವದ ನೇಮೋತ್ಸವ , ಕಂಚೀಲು ಸೇವೆ ,ಮಡಸ್ನಾನ ,ಪಲ್ಲಕಿ,ಬಂಡಿ ಉತ್ಸವ ಬಲಿ ಹಾಗೂ ಪಂಚ ದೈವಗಳ ದರ್ಶನ  ಸೇವೆಯು  ಜರುಗಿತು.
ಈ ಸಂದರ್ಭ   ಎಕ್ಕಾರು  ಶ್ರೀ ಗೋಪಾಲಕೃಷ್ಣಮಠದ  ವೇದಮೂರ್ತಿ ಹರಿದಾಸ ಉಡುಪ,  ಎಕ್ಕಾರು ಶ್ರೀಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ(ತಿಮ್ಮ ಕಾವರು),ಭಾಸ್ಕರ ಮುದ್ದ ನಡ್ಯೋಡಿಗುತ್ತು,ರತ್ನಾಕರ ಶೆಟ್ಟಿ ಬಡಕರೆ ಬಾಳಿಕೆ,ರಮೇಶ್ ಭಂಡಾರಿ ಮಿತ್ತೊಟ್ಟು ಬಾಳಿಕೆ ಮೇಲೆಕ್ಕಾರು,ಶಾಸಕ ಉಮಾನಾಥ ಕೋಟ್ಯಾನ್ ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ  ,ಸಹಕಾರ ರತ್ನ ಮೋನಪ್ಪ ಶೆಟ್ಟಿ ಎಕ್ಕಾರು , ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೋನಾಲ್ಡ್ ಫೆರ್ನಾಂಡಿಸ್,ಅಭಿಲಾಷ್ ಶೆಟ್ಟಿ ಕಟೀಲು 4ಕರೆ ,32 ವರ್ಗ ,ಊರ ಹತ್ತು ಸಮಸ್ತರು ಹಾಗೂ ಗಣ್ಯಾತೀಗಣ್ಯರು ಉಪಸ್ಥಿತರಿದ್ದರು.
ಆದಿತ್ಯವಾರ  ರಾತ್ರಿ 9 ರಿಂದ ಶ್ರೀಕೊಡಮಣಿತ್ತಾಯ ದೈವದ ನೇಮೋತ್ಸವ ವು ನಡೆಯಲಿದೆ.ಜ.13 ರ ಸೋಮವಾರ ರಾತ್ರಿ 9 ರಿಂದ  ಶ್ರೀ ಕಾಂತೇರಿ ಜುಮಾದಿ  ದೈವದ ನೇಮೋತ್ಸವ,ಜ.14 ರ  ಮಂಗಳವಾರ ರಾತ್ರಿ 9ರಿಂದ ಶ್ರೀಜಾರಂದಾಯ ದೈವದ ನೇಮೋತ್ಸವ,ಜ.15 ರ  ಬುಧವಾರ ರಾತ್ರಿ 9ರಿಂದ  ಶ್ರೀ ಸರಳ ಜುಮಾದಿ ದೈವದ ನೇಮೋತ್ಸವ,ಜ.16 ರ  ಗುರುವಾರ  ರಾತ್ರಿ 9 ರಿಂದ  ಶ್ರೀ ಪಿಲಿ ಚಾಮುಂಡಿ ದೈವದ ನೇಮೋತ್ಸವ  ಹಾಗೂ ಜ.17 ರ ಶುಕ್ರವಾರ  ಬೆಳಿಗ್ಗೆ 10 ಕ್ಕೆ ಧ್ವಜ ಅವರೋಹಣ ದೊಂದಿಗೆ ವರ್ಷಾವಧಿ ಜಾತ್ರೆಯು ಸಂಪನ್ನಗೊಳ್ಳಲಿದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article