ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಏಕಶಿಲಾ ಧ್ವಜಸ್ತಂಭದ ಮೆರವಣಿಗೆಗೆ ಚಾಲನೆ
Sunday, January 12, 2025
ಹಳೆಯಂಗಡಿ : ಬಿಲ್ಲವರ ಹಿತವರ್ಧಕ ಸಂಘ (ರಿ) ಸಂಚಾಲಕತ್ವದ ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ಏಕ ಶಿಲಾ ಧ್ವಜಸ್ತಂಭದ ಮೆರವಣಿಗೆಗೆ ಜ.12 ರ ಭಾನುವಾರದಂದು ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಆವರಣದಲ್ಲಿ ಹಳೆಯಂಗಡಿ ಶ್ರೀ ನಾರಾಯಣ ಗುರು ಮಂದಿರದಲ್ಲಿ ಗರೊಡಿ ಕ್ಷೇತ್ರದ ಪುರೋಹಿತರಾದ ರಂಗ ಭಟ್ ಪ್ರಾರ್ಥನೆ ನೆರವೇರಿಸಿ ಚಾಲನೆಯನ್ನು ನೀಡಿದರು.
ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರ ಪರವಾಗಿ ಗೌತಮ್ ಜೈನ್,
ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ವಾಸ್ತುಶಿಲ್ಪಿ ಉಮೇಶ್ ಆಚಾರ್ಯ, ಗರೊಡಿ ಅರ್ಚಕ ತೋಚೋಡಿ ಶೇಖರ ಪೂಜಾರಿ, ದಯಾನಂದ ಗುರಿಕಾರರು, ತೀಯಾ ಸಮಾಜ ಸೇವಾ ಸಂಘದ ಸುರೇಶ್ ಬಂಗೇರ, ಯುವ ಮುಖಂಡರಾದ
ಮಿಥುನ್ ರೈ, ಸತ್ಯಜಿತ್ ಸುರತ್ಕಲ್, ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ,
ಪಡುಪಣಂಬೂರು ಪಂಚಾಯತ್ ಅಧ್ಯಕ್ಷೆ ಕುಸುಮಾ ಚಂದ್ರಶೇಖರ್, ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್, ಮೋಹನ್ ಸುವರ್ಣ, ಅಗ್ಗಿದಕಳಿಯ ಬಿಲ್ಲವ ಸಮಾಜ ಸಂಘದ ಪ್ರಕಾಶ್ ಬಿ. ಎನ್,
ಮಿತ್ರಪಟ್ಣ ಮೊಗವೀರ ಸಭಾದ ಅಧ್ಯಕ್ಷ ಸುರೇಶ್ ಕರ್ಕೇರ,
ಖಂಡಿಗೆ ಬೀಡಿನ ರಾಜೇಶ್, ಜೀರ್ಣೋದ್ಧಾರ ಸಮಿತಿಯ ಪದ್ಮನಾಭ ಬಂಗೇರ, ಪರಮಾನಂದ ಸಾಲ್ಯಾನ್ ಮತ್ತು ಪದಾಧಿಕಾರಿಗಳು, ಆಡಳಿತ ಸಮಿತಿಯ ಜಗನ್ನಾಥ ಕೋಟ್ಯಾನ್ ಮತ್ತು ಪದಾಧಿಕಾರಿಗಳು , ಅನಿಲ್ ಪೂಜಾರಿ, ಮುಂಬೈ ಸಮಿತಿಯ ಅಶೋಕ್ ಕುಕ್ಯಾನ್, ಸೂರ್ಯಕುಮಾರ್ ಮತ್ತಿತರರು ಇದ್ದರು.
ಹಳೆಯಂಗಡಿಯಿಂದ ಮುಕ್ಕದ ಮುಖೇನ ಹೊರಟ ಮೆರವಣಿಗೆ ಕುಣಿತ ಭಜನಾ ತಂಡ, ಹುಲಿ ವೇಷ ಕುಣಿತ, ಬೊಂಬೆ ಕುಣಿತ ಸೇರಿದಂತೆ ವಿವಿಧ ವಿನೋದಾವಳಿಗಳೊಂದಿಗೆ ಸಸಿಹಿತ್ಲು ಬಬ್ಬರ್ಯ ದೈವಸ್ಥಾನ, ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ರಸ್ತೆ ಮುಖೇನ ಸಸಿಹಿತ್ಲು ಶ್ರೀ ಸಾರಂತಾಯ ಗರೊಡಿ ಕ್ಷೇತ್ರಕ್ಕೆ ತಲುಪಿತು. ಮೆರವಣಿಗೆಯಲ್ಲಿ ಹಳೆಯಂಗಡಿ,ಮುಕ್ಕ , ಸಸಿಹಿತ್ಲು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.