ಮಕ್ಕಳ ವಿದ್ಯಾನಿಧಿಗೆ ಪೂರಕವಾಗಿ ಆಟೋ ಚಾಲಕರ ಸಾಮಾಜಿಕ ಕಳಕಳಿ ಅಭಿನಂದನೀಯ - ಮೋಹನ್ ಕೋಟ್ಯಾನ್
Wednesday, January 1, 2025
ಮುಲ್ಕಿ: ಆಟೋರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಮಕ್ಕಳ ವಿದ್ಯಾನಿಧಿ ಪ್ರಯುಕ್ತ ಸಾಮಾಜಿಕ ಕಾರ್ಯಕ್ರಮಗಳಿಗೆ ಮುಲ್ಕಿ ಬಸ್ ನಿಲ್ದಾಣದ ಬಳಿ ಚಾಲನೆ ನೀಡಲಾಯಿತು
ಮುಖ್ಯ ಅತಿಥಿಗಳಾಗಿ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಮಾತನಾಡಿ ಮಕ್ಕಳ ವಿದ್ಯಾನಿಧಿಗೆ ಪೂರಕವಾಗಿ ಆಟೋ ಚಾಲಕರ ಸಾಮಾಜಿಕ ಕಳಕಳಿ ಅಭಿನಂದನೀಯ ಇದು ನಿರಂತರವಾಗಿ ನಡೆಯಲಿ ಎಂದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮುಲ್ಕಿ ನ.ಪಂ ಅಧ್ಯಕ್ಷ ಸತೀಶ್ ಅಂಚನ್ ಮಾತನಾಡಿ ಆಟೋ ಚಾಲಕರು ಊರಿನ ರಾಯಭಾರಿಗಳಾಗಿದ್ದು ಸಾಮರಸ್ಯದ ಕೊಂಡಿಯಾಗಿದ್ದಾರೆ .ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಎಸ್ ವಿ ಟಿ ಪ್ರಬಂಧಕ ನಾಗೇಶ್ ಪೈ
ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ್ ಕೋಟ್ಯಾನ್ ನಡಿಕುದ್ರು, ಉದ್ಯಮಿಗಳಾದ ಅವಿನಾಶ್ ಕೋಟ್ಯಾನ್, ನಾಗರಾಜ್ ಭಟ್, ಸಂಪತ್ ಕೋಟ್ಯಾನ್, ಮುಲ್ಕಿ ಆಟೋ ರಿಕ್ಷಾ ಚಾಲಕರ ಮಾಲಕರ ಸಂಘದ ಗೌರವಾಧ್ಯಕ್ಷ ವಕೀಲ ಹಾಗೂ ನೋಟರಿ ಬಿಪಿನ್ ಪ್ರಸಾದ್ ಅಧ್ಯಕ್ಷ ದೇವರಾಜ ಕೊಲಕಾಡಿ, ಪತ್ರಕರ್ತರಾದ ಹರೀಶ್ ಹೆಜ್ಮಾಡಿ,ಪುನೀತ್ ಕೃಷ್ಣ,ಮತ್ತಿತರರು ಉಪಸ್ಥಿತರಿದ್ದರು ಸತೀಶ್ ಮಾನಂಪಾಡಿ ಸ್ವಾಗತಿಸಿದರು
ಶ್ರೀನಿವಾಸ ಹೊಲಕಾಡಿ ನಿರೂಪಿಸಿದರು.
ಬಳಿಕ ಮುಲ್ಕಿ ಆಟೋ ಚಾಲಕರಿಗೆ ಸೂಕ್ತ ನಿಲ್ದಾಣ ಒದಗಿಸುವಂತೆ ಮನವಿ ಹಾಗೂ ವಿದ್ಯಾನಿಧಿಯ ಸಾಮಾಜಿಕ ಕಾರ್ಯಕ್ರಮ ನಡೆಯಿತು.