ಪ್ರಿಯದರ್ಶಿನಿ ಸೊಸೈಟಿಯು ಕರಾವಳಿ ಜಿಲ್ಲೆಗಳಲ್ಲಿ ತನ್ನ ಕಾರ್ಯಗಳನ್ನು ವೃದ್ಧಿಸಲಿ - ಬಿಷಪ್ ಹೇಮಚಂದ್ರ
Wednesday, January 1, 2025
ಹಳೆಯಂಗಡಿ:ಗ್ರಾಮಾಂತರ ಪ್ರದೇಶವನ್ನು ಕೇಂದ್ರವನ್ನಾಗಿಸಿ ಅತ್ಯಲ್ಪ ಅವಧಿಯಲ್ಲಿ ಉತ್ತಮ ಸಾಧನೆಗೈದು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿರುವ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯು ಕರಾವಳಿ ಜಿಲ್ಲೆಗಳಲ್ಲಿ ಇನ್ನಷ್ಟು ವಹಿವಾಟುಗಳನ್ನು ಮಾಡಿ ಸಮಾಜಕ್ಕೆ ಮಾದರಿಯಾಗಿ ಮುಂದುವರಿಯಲಿ ಎಂದು ಚರ್ಚ್ ಆಫ್ ಸೌತ್ ಇಂಡಿಯಾ ಕರ್ನಾಟಕ ಸದರ್ನ್ ಡೈಯಾಸಿಸಿನ ಬಿಷಪ್ ರೈಟ್ ರೆವರೆಂಡ್ ಹೇಮಚಂದ್ರ ಹೇಳಿದರು.
ಅವರು ಹೊಸ ವರ್ಷದ ಸಲುವಾಗಿ ಪ್ರಿಯದರ್ಶಿನಿ ಕೋ ಅಪರೇಟಿವ್ ಸೊಸೈಟಿಗೆ ಭೇಟಿ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರೆ. ಅಮೃತ್ ರಾಜ್ ಕೊಡೆ, ಜೇಮ್ಸ್ ಕರ್ಕಡ, ಸೊಸೈಟಿ ಅಧ್ಯಕ್ಷ ಎಚ್ ವಸಂತ ಬರ್ನಾಡ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಉಪಸ್ಥಿತರಿದ್ದರು.