ಎಕ್ಕಾರು:ಜಾತ್ರಾ ಮಹೋತ್ಸವದ ಪೂರ್ವಭಾವಿಯಾಗಿ ಕೋಳಿಗುಂಟ,ಹಾಳೆ ಮುಹೂರ್ತ
Wednesday, January 1, 2025
ಬಜಪೆ:ಎಕ್ಕಾರು ಶ್ರೀ ಕೊಡಮಂತ್ತಾಯ ದೈವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಜ.11 ರಿಂದ ಜ. 17 ರ ತನಕ ಜರುಗಲಿದ್ದು, ಜಾತ್ರಾ ಮಹೋತ್ಸವದ ಪೂರ್ವಭಾವಿಯಾಗಿ ಎಕ್ಕಾರು ಬೊಳ್ಳಿ ಅಶ್ವಥಮರದ ಬಳಿ ಕೋಳಿಗುಂಟ ,ಹಾಲೆ ಮೂಹೂರ್ತವು ನಡೆಯಿತು.ಮುಹೂರ್ತ ನಡೆದ ಹನ್ನೆರಡು ದಿವಸಗಳ ನಂತರ ಇಲ್ಲಿನ ಜಾತ್ರಾ ಮಹೋತ್ಸವವು ಆರಂಭವಾಗುತ್ತದೆ.ಇಂದಿನಿಂದ ಊರಿನಲ್ಲಿ ಜಾತ್ರೆ ಮುಗಿಯುವ ತನಕ ಯಾವುದೇ ಶುಭ - ಅಶುಭ ಕಾರ್ಯಕ್ರಮಗಳು ನಡೆಯುದಿಲ್ಲ.
ಈ ಸಂದರ್ಭ ಎಕ್ಕಾರು ಶ್ರೀಗೋಪಾಲಕೃಷ್ಣ ಮಠದ ವೇದಮೂರ್ತಿ ಹರಿದಾಸ ಉಡುಪ,ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ(ತಿಮ್ಮ ಕಾವರು),ಪ್ರಸನ್ನ ಮುದ್ದ ನಡ್ಯೋಡಿಗುತ್ತು,ರತ್ನಾಕರ ಶೆಟ್ಟಿ ಬಡಕರೆ ಬಾಳಿಕೆ,ಸಂತೋಷ್ ಭಂಡಾರಿ ಮಿತ್ತೊಟ್ಟು ಬಾಳಿಕೆ ಮೇಲೆಕ್ಕಾರು,ಸದಾನಂದ ಮೊಯಿಲಿ,ಮೋನಪ್ಪ ಶೆಟ್ಟಿ ಎಕ್ಕಾರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.