-->


ಅಮೃತ ಮಹೋತ್ಸವದ ಸಂಭ್ರಮದಲ್ಲಿ  ಮಳಲಿಯ ಶ್ರೀ ರಾಮಾಂಜನೇಯ  ಭಜನಾ ಮಂದಿರ,ಫೆ.6- 9ರ ತನಕ  ವಾರ್ಷಿಕ ಮಂಗಲೋತ್ಸವ , ಅಖಂಡ ಮಂಗಲೋತ್ಸವ

ಅಮೃತ ಮಹೋತ್ಸವದ ಸಂಭ್ರಮದಲ್ಲಿ ಮಳಲಿಯ ಶ್ರೀ ರಾಮಾಂಜನೇಯ ಭಜನಾ ಮಂದಿರ,ಫೆ.6- 9ರ ತನಕ ವಾರ್ಷಿಕ ಮಂಗಲೋತ್ಸವ , ಅಖಂಡ ಮಂಗಲೋತ್ಸವ

ಕೈಕಂಬ : ಎಪ್ಪತೈದು ವರ್ಷಗಳ ಹಿಂದೆ ಮಂಗಳೂರು ತಾಲೂಕಿನ ಮೊಗರು ಗ್ರಾಮದ  ಮಳಲಿ(ಮಣೇಲ್)ಯ ಯಮನ ತೋಟ ಎಂಬ ಸ್ಮಶಾನದಲ್ಲಿ ನಡೆಯುತ್ತಿದ್ದ ಶವ ಸಂಸ್ಕಾರದಿಂದಾಗಿ ಸುತ್ತಮುತ್ತಲಿನ ಜನರು ಹತ್ತು ಹಲವು ಸಮಸ್ಯೆಗಳನ್ನು ಎದುರಿಸಿದ್ದ ಕಾಲದಲ್ಲಿ ಇಲ್ಲಿನ ಹಿರಿಯರು ಹಲವು ಪರಿಹಾರ ಮಾಡಿದರೂ ಪ್ರಯೋಜನವಾಗದಿದ್ದಾಗ ಕೊಡಿಂಜೆಕಲ್ಲು ಶ್ರೀ ಶ್ರೀ ಶಾರದಾ ದಾಸ್ ಸ್ವಾಮೀಜಿಯವರ ಮೊರೆ ಹೋದಾಗ, ಸ್ವಾಮೀಜಿಯವರ ಸಲಹೆಯಂತೆ ಯಮನ ತೋಟ ಎಂಬಲ್ಲಿ ಶ್ರೀರಾಮ ದೇವರ ಜೊತೆಗೆ ಆಂಜನೇಯನ ಸ್ಮರಣೆ ನಡೆಸಿದಾಗ ಅದುವರೆಗೂ ಕಾಡುತ್ತಿದ್ದ ಪ್ರೇತ ಭಾಧೆ ಸಹಿತ ಎಲ್ಲಾ ತೊಂದರೆಗಳು ನಿವಾರಣೆಯಾದ ಹಿನ್ನಲೆಯಲ್ಲಿ ಹಿರಿಯರು ಶ್ರೀರಾಮ ಮತ್ತು ಆಂಜನೇಯನಿಗೆ ಮಂದಿರ ನಿರ್ಮಿಸಲು ಮನ ಮಾಡಿ, 1950ರ ಫೆಬ್ರವರಿ 20ರ ಶುಭದಿನದಂದು ಶ್ರೀ ಶಾರದಾ ದಾಸ್ ಸ್ವಾಮೀಜಿಯವರಿಂದ ಶ್ರೀ ರಾಮಾಂಜನೇಯ ದೇವರ ಭಾವಚಿತ್ರ ಪ್ರತಿಷ್ಠಾಪನೆ ಮಾಡಿ ಭಜನೆಯನ್ನು ಆರಂಭಿಸಿದರು.ಶ್ರೀ ರಾಮಂಜನೇಯರ ಸಾನಿಧ್ಯದಿಂದಾಗಿ  ಯಮನ ತೋಟ ಎಂಬ ಹೆಸರು ಮುಂದೆ ಎಂಬತೋಟ ಎಂದೆನಿಸಿಕೊಂಡಿತು. ಬಳಿಕ ಇಲ್ಲಿನ ಹತ್ತು ಹಲವರ ಕಠಿಣ ಪರಿಶ್ರಮದಿಂದ  ಇಲ್ಲಿ ಭವ್ಯ ಮಂದಿರ ನಿರ್ಮಾಣವಾಗಿ, ಪ್ರತಿ ಮಂಗಳವಾರ ಭಜನೆ ಪ್ರಾರಂಭವಾಯಿತು. ಪ್ರತಿ ವರ್ಷ  ಅಂದಾಜು 700 ಮನೆಗಳಿಗೆ ನಗರ ಭಜನೆ ನಡೆದು ಬಳಿಕ ಭಜನಾ ಮಂಗಲೋತ್ಸವ ನಡೆಯುತ್ತಿದೆ.
ಇದೀಗ ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಭಜನಾ ಮಂದಿರದಲ್ಲಿ ಫೆಬ್ರವರಿ 6ರ ಗುರುವಾರದಿಂದ 9ರ ಭಾನುವಾರದವರೆಗೆ ವಾರ್ಷಿಕ ಮಂಗಲೋತ್ಸವ ಸಹಿತ ಮೂರು ದಿನಗಳ ಅಖಂಡ ಮಂಗಲೋತ್ಸವ ನಡೆಯಲಿದೆ. 
ಫೆಬ್ರವರಿ 2ರ ಭಾನುವಾರ 
ಸಂಜೆ 4ರಿಂದ ಹೊರೆಕಾಣಿಕೆ ಹಾಗೂ ಬೆಳ್ಳಿಯ ನೂತನ ಭಾವಚಿತ್ರದ ಮೆರವಣಿಗೆ(ಮಳಲಿ ಬೆಂಕಟರಮಣ ದೇವಸ್ಥಾನದಿಂದ ಭಜನಾ ಮಂದಿರಕ್ಕೆ)ನಡೆಯಲಿದೆ.

ಸಂಜೆ 5 ರಿಂದ ದೇವತಾ ಪ್ರಾರ್ಥನೆ, ಪ್ರಣ್ಯಹವಾಚನ ವಾಸ್ತುಪೂಜೆ ಹಾಗೂ ಸುದರ್ಶನ ಹೋಮ.ಸಂಜೆ 7 ಕ್ಕೆ ಮಳಲಿ ಹತ್ತು ಸಮಸ್ತರ ಬಾಬ್ತು  ಸುಂಕದಕಟ್ಟೆ ಮೇಳದವರಿಂದ ಯಕ್ಷಗಾನ ಬಯಲಾಟ.

3 ರ ಸೋಮವಾರ 
ಬೆಳಿಗ್ಗೆ 7:30ರಿಂದ ಗಣಯಾಗ, 10:50ರಿಂದ ಶ್ರೀ ರಾಮಾಂಜನೇಯ ದೇವರ ನೂತನ ಬೆಳ್ಳಿಯ ಭಾವ ಚಿತ್ರದ ಪ್ರತಿಷ್ಠಾ ಮಹೋತ್ಸವ ಹಾಗೂ ಕಲಶಾಭಿಷೇಕ, ಬೆಳಿಗ್ಗೆ 11:30ರಿಂದ 12:30ರ ವರೆಗೆ ಭಜನಾ ಸಂಕೀರ್ತನೆ. ಮಧ್ಯಾಹ್ನ 12:30ರಿಂದ ಮಹಾಪೂಜೆ.
ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ.
ಸಾಯಂಕಾಲ 7:30ರಿಂದ 9 ರವರೆಗೆ ಭಜನಾ ಸಂಕೀರ್ತನೆ.
4ರ ಮಂಗಳವಾರ ರಾತ್ರಿ7:30ರಿಂದ 9 ರವರೆಗೆ ಭಜನಾ ಸಂಕೀರ್ತನೆ.

5ರ ಬುಧವಾರ ರಾತ್ರಿ 7:30ರಿಂದ 9 ರವರೆಗೆ ಭಜನಾ ಸಂಕೀರ್ತನೆ.

6 ರ ಗುರುವಾರ ಸೂರ್ಯೋದಯದಿಂದ ಅಖಂಡ ಭಜನಾ ಸಂಕೀರ್ತನೆ. 9ರ ಭಾನುವಾರ ಸೂರ್ಯೋದಯಕ್ಕೆ ಅಖಂಡ ಭಜನಾ  ಮಂಗಲೋತ್ಸವ. ಮಹಾಪೂಜೆ, ಪ್ರಸಾದ ವಿತರಣೆ.
ಭಾನುವಾರ ಸಾಯಂಕಾಲ 6:30ರಿಂದ 8 ಗಂಟೆಯವರೆಗೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ 8 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ಬಳಿಕ 9:30ರಿಂದ ಬೆನಕ ಆರ್ಟ್ಸ್ ಕುಡ್ಲ ಕಲಾವಿದರಿಂದ ಪೊರಿಪುದಪ್ಪೆ ಜಲದುರ್ಗೆ ಎಂಬ ಸಿನಿ ನಾಟಕ ಪ್ರದರ್ಶನ ನಡೆಯಲಿದೆ ಎಂದು ಭಜನಾ ಮಂದಿರ ಮತ್ತು ಅಮೃತ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article