ಕಿನ್ನಿಗೋಳಿ: ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷರಾಗಿ ಹಾಜಿ ಟಿ.ಹೆಚ್. ಮಯ್ಯದ್ದಿ ಆಯ್ಕೆ
Monday, January 13, 2025
ಕಿನ್ನಿಗೋಳಿ:ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ನೂರುಲ್ ಇಸ್ಲಾಂ ಅಸೋಸಿಯೇಶನ್ ಕಿನ್ನಿಗೋಳಿ ಇದರ ನೂತನ ಆಡಳಿತ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ಕೆ.ಎ. ಅಬ್ದುಲ್ಲ ಸಭಾಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ 2025 ನೇ ಸಾಲಿನ ಆಡಳಿತ ಸಮಿತಿಗೆ ಅಧ್ಯಕ್ಷರಾಗಿ ಹಾಜಿ ಟಿ.ಹೆಚ್. ಮಯ್ಯದ್ದಿ ಆಯ್ಕೆಯಾದರು. ಉಪಾಧ್ಯಕ್ಷ ಅಬ್ದುಲ್ ಖಾದರ್, ಕಾರ್ಯದರ್ಶಿ ರಫೀಕ್ ಎನ್.ಎ., ಉಪಕಾರ್ಯದರ್ಶಿ ರಹೀಂ, ಕೋಶಾಧಿಕಾರಿ ಹಿದಾಯತುಲ್ಲ, ಲೆಕ್ಕಪರಿಶೋಧಕ ಹಬೀಬ್ ಅತ್ತೂರು ಆಯ್ಕೆಯಾದರು.
ನೂತನ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ರಫೀಕ್ ಫ್ಲವರ್, ಉಸ್ಮಾನ್, ಮುನೀರ್ ಫ್ರೂಟ್ಸ್, ಹಮೀದ್ ಶೇರ್ ಈಟ್, ನೂರುದ್ದೀನ್, ಶಬೀರ್, ರಮೀಝ್, ಆರೀಫ್ ಟಿ.ಹೆಚ್., ರಝಾಕ್ ಉಲ್ಲಂಜೆ, ಶಂಶುದ್ದೀನ್ ಶೂ ಫ್ಯಾಶನ್ ನೇಮಕಗೊಂಡರು.