ಸೌತ್ ಏಷಿಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಓಪನ್ ಚಾಂಪಿಯನ್ ನಲ್ಲಿ ಸುಷ್ಮಾ ತಾರಾ ನಾಥ್ ಗೆ ಚಿನ್ನದ ಪದಕ
Monday, January 13, 2025
ಮಂಗಳೂರು: ಮಂಗಳಾ ಸ್ಟೇಡಿಯಂನಲ್ಲಿ ನಡೆದ ಸೌತ್ ಏಷಿಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಓಪನ್ ಚಾಂಪಿಯನ್ ನಲ್ಲಿ ಸುಷ್ಮಾ ತಾರಾ ನಾಥ್ ರವರು ಮಹಿಳಾ ರಿಲೇ ಹಾಗೂ ಮಿಕ್ಸ್ ಡ್ ರಿಲೇ ಯಲ್ಲಿ ತಲಾ ಒಂದು ಚಿನ್ನದ ಪದಕ, ಟ್ರಿಪಲ್ ಜಂಪ್ ನಲ್ಲಿ ಬೆಳ್ಳಿಯ ಪದಕ, 100 ಮೀಟರ್ ಓಟದಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಇವರು ಹಳೆಯಂಗಡಿ ಗ್ರಾಮ ಪಂಚಾಯತ್ ಹಿರಿಯ ಸಿಬ್ಬಂದಿಯಾಗಿದ್ದಾರೆ.
ಭಾರತದಲ್ಲಿ ಮೊದಲ ಬಾರಿಗೆ ಈ ಕ್ರೀಡಾಕೂಟ ನಡೆಯುತ್ತಿದ್ದು, ದೇಶವಿದೇಶದ ಸುಮಾರು1,800ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ.
ಶ್ರೀಲಂಕಾ ದೇಶದ 130, ನೇಪಾಲದ 10, ಬೂತಾನ್ ನ 45 ಮಂದಿ ಸಹಿತ ಭಾರತದ 17 ರಾಜ್ಯಗಳ ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. ಓಟ, ಹೈಜಂಪ್, ಲಾಂಗ್ ಜಂಪ್, ಟ್ರಿಪಲ್ ಜಂಪ್, ಪೋಲ್ ವಾಲ್ಟ್ ಡಿಸ್ಕಸ್ ತೋ, ಹ್ಯಾಮರ್ ತ್ರೋ, ಶಾಟ್‌ಪುಟ್, ಜಾವಲಿನ್, ರಿಲೇ ಸಹಿತ 27 ಕ್ರೀಡೆಗಳನ್ನು ಆಯೋಜಿಸಲಾಗಿದೆ.