ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ವತಿಯಿಂದ ಸ್ವಾಮಿ ವಿವೇಕಾನಂದರ 162ನೇ ಜಯಂತ್ಯೋತ್ಸವ, ವಿವೇಕ ಕಾಯಕ ರತ್ನ ಪ್ರಶಸ್ತಿ ಪ್ರಧಾನ
Tuesday, January 28, 2025
ಕಿನ್ನಿಗೋಳಿ :ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ವತಿಯಿಂದ ಸ್ವಾಮಿ ವಿವೇಕಾನಂದರ 162ನೇ ಜಯಂತ್ಯೋತ್ಸವದ ಅಂಗವಾಗಿ ವಿವೇಕ ಕಾಯಕ ರತ್ನ ಪ್ರಶಸ್ತಿ ಪ್ರಧಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಾನುವಾರ ಸಂಜೆ ಕಿನ್ನಿಗೋಳಿ ಚರ್ಚ್ ಮೈದಾನದ ವೇದಿಕೆಯಲ್ಲಿ ನಡೆಯಿತು.
ಕಿನ್ನಿಗೋಳಿ ಕೊಸೆ ಸಾoವ್ ಚರ್ಚ್ ನ ಧರ್ಮ ಗುರುಗಳಾದ ವಂ. ಫಾ. ಜೋಕಿಮ್ ಫೆರ್ನಾಂಡಿಸ್ ರವರು ಕಾರ್ಯಕ್ರಮ ಉದ್ಘಾಟಿಸಿದರು.
ಕೇಮಾರು ಸಾಂದೀಪನಿ ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ ವಹಿಸಿದ್ದರು
ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತ ಅರಸರು ವಿವೇಕ ಕಾಯಕ ರತ್ನ ಪ್ರಶಸ್ತಿ ಪ್ರಧಾನಿಸಿ ಮಾತನಾಡಿದರು.
ಅಖಿಲ ಕರ್ನಾಟಕ ಕರಾವಳಿ ಒಕ್ಕೂಟ ಗೌರವಾಧ್ಯಕ್ಷ ಹಾಗೂ ಸಾಹಿತಿ ಡಾ.ಎಸ್ ಶ್ರೀನಿವಾಸ ಶೆಟ್ಟಿ ಸ್ವಾಮಿ ವಿವೇಕಾನಂದರ ಸಂದೇಶ ನೀಡಿದರು.
ಮುಖ್ಯ ಅತಿಥಿಗಳಾಗಿ ಕಿನ್ನಿಗೋಳಿ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ ,ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ.ಐಕಳಬಾವ ದೇವಿ ಪ್ರಸಾದ್ ಶೆಟ್ಟಿ, ಮಂಡ್ಯ ಮಹಿಳಾ ಮತ್ತು ಮಕ್ಕಳ ಧ್ವನಿ ಸಂಸ್ಥೆಯ ಅಧ್ಯಕ್ಷೆ ರಜನಿ ರಾಜ್,ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ, ಕಿನ್ನಿಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕುಶಲ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಬಹುಮುಖ ಸಾಧಕರ ನೆಲೆಯಲ್ಲಿ ದರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ವೈದ್ಯಕೀಯ ಸೇವೆಗಾಗಿ ಡಾ. ಭಗಿನಿ ಜೀವಿತಾರವರಿಗೆ ವಿಶೇಷವಾಗಿ ಅಭಿನಂದಿಸಲಾಯಿತು ಹಾಗೂ ಯೋಗ ಯಕ್ಷಗಾನ ಕ್ರೀಡೆಯಲ್ಲಿ ವಿಶೇಷ ಸಾಧನೆ ಮಾಡಿದ ಕ್ಷಿತಿಜ್ ಕೆ ಹಾಗೂ ವಿವೇಕ ಕಾಯಕ ಪ್ರಶಸ್ತಿ ಪುರಸ್ಕೃತರಾದ ವಾಸುದೇವ ಆಚಾರ್ಯ ಕಲ್ಲಮುಂಡ್ಕೂರು(ಶಿಲ್ಪಕಲೆ), ಶಿವಾನಂದ ಸಾಲ್ಯಾನ್(ಕ್ಷೌರಿಕ ವೃತ್ತಿ), ವೆಂಕಪ್ಪ ನಾಯ್ಕ, ಪುತ್ತಿಗೆ ಪದವು (ರುದ್ರಭೂಮಿ ಕಾಯಕ), ಯಾದವ ಪೂಜಾರಿ (ದೈವ ದರ್ಶನ ಪಾತ್ರಿ), ವಿಶ್ವನಾಥ ಮಡಿವಾಳ ಕವತ್ತಾರು(ದೀವಟಿಕೆ ಹಿಡಿಯುವವರು), ಲಕ್ಷ್ಮಿ ಎಸ್ ಪೂಜಾರಿ, ಮುಂಡ್ಕೂರು,(ಗ್ರಾಮೀಣ ಅಂಚೆ ವಿತರಕರು), ಶಂಕರ್ ಕೆ ಪುತ್ತೂರು ಕಾವು (ಭಾರತೀಯ ಸೈನಿಕ ಸೇವೆ), ಆನಂದ ಶೆಟ್ಟಿಗಾರ ಅಂಗಾರಗುಡ್ಡೆ (ನೇಕಾರ ವೃತ್ತಿ ಕೈಮಗ್ಗ), ಪ್ರಕಾಶ್ ಆಚಾರ್ಯ ಕಿನ್ನಿಗೋಳಿ (ಕಲಾ ರಂಗ), ಮಾಧವ ಆಚಾರ್ಯ ನೀರುಡೆ (ಕಮ್ಮಾರ), ದಿವಾಕರ ಚೌಟ ಉಳೆಪಾಡಿ(ಕಂಬಳ ಕ್ಷೇತ್ರ), ಲಲಿತಾ ಶೆಟ್ಟಿ ಏಳಿಂಜೆ(ಹೈನುಗಾರಿಕೆ), ಸತೀಶ್ ಶೆಟ್ಟಿ ಬೈಲಗುತ್ತು(ಪ್ರಗತಿಪರ ಕೃಷಿಕ) ಹಾಗೂ ಅತ್ಯುತ್ತಮ ಸೇವಾ ಸಂಸ್ಥೆಗಳಾದ ಶ್ರೀ ರಾಮ ಯುವಕ ವೃಂದ ಗೋಳಿಜಾರ, ಶ್ರೀದೇವಿ ಮಹಿಳಾ ಮಂಡಳಿ ತೋಕೂರು ರವರನ್ನು ಗೌರವಿಸಲಾಯಿತು.
ಸಂಸ್ಥೆಯ ಸಂಚಾಲಕರಾದ ಸೀತಾರಾಮ ಶೆಟ್ಟಿ ಎಳತ್ತೂರು ಧನ್ಯವಾದ ಅರ್ಪಿಸಿದರು ಶರತ್ ಶೆಟ್ಟಿ ನಿರೂಪಿಸಿದರು
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.