ಕಾವೂರು : ಮಹಿಳಾ ಜ್ಞಾನ ವಿಕಾಸ ಕೇಂದ್ರದಲ್ಲಿ ಮಹಿಳೆಯರಿಗೆ ಸ್ವಾ ಉದ್ಯೋಗ ಪ್ರೇರಣೆ ಶಿಬಿರ
Tuesday, January 28, 2025
ಕಾವೂರು :ಮಹಿಳೆಯರು ಸಣ್ಣ ಪುಟ್ಟ ಸಹ ಉದ್ಯೋಗ ಕೈಗೊಂಡಲ್ಲಿ ನಾವು ಮೂಲೆಗುಂಪಾಗದೆ ನಾಲ್ಕು ಜನ ನಮ್ಮನ್ನು ಗುರುತಿಸಲು ಸಾಧ್ಯ, ಅಲಂಕಾರಿಕ ವಸ್ತುಗಳ ತಯಾರಿಯಂತೆ ಇತರ ವಿದ್ಯೆಯನ್ನು ಕಲಿತು ತಮ್ಮ ಜೀವನಕ್ಕಾಗಿ ಸ್ವ ಉದ್ಯೋಗವನ್ನು ಪಡೆದುಕೊಳ್ಳಿರಿ ಎಂದು ಜಾಗೃತಿ ವೇದಿಕೆಯ ಸಮನ್ವಧಿಕಾರಿ ಡಾ.ಶಂಶಾದ್ ಹೇಳಿದರು.
ಅವರು ಕಾವೂರು ಬೋಂದೆಲ್ ಕೃಷ್ಣ ನಗರ ಅಂಗನವಾಡಿ ಕೇಂದ್ರದದಲ್ಲಿ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಮಹಿಳೆಯರಿಗೆ ತಾವು ದಿನನಿತ್ಯದಲ್ಲಿ ಬಳಸುವ ಅಲಂಕಾರ ಜ್ಯುವೆಲ್ಲರಿ ವಸ್ತುಗಳ ತಯಾರಿಯ ಪ್ರಾತ್ಯಕ್ಷಿಕೆ ಸ್ವ ಉದ್ಯೋಗ ಪ್ರೇರಣೆ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪುಷ್ಪಲತಾ ಅಧ್ಯಕ್ಷತೆಯನ್ನು ವಹಿಸಿದ್ದರು.
ಕೇಂದ್ರ ಒಕ್ಕೂಟದ ಅಧ್ಯಕ್ಷ ರಾಜೇಶ್ ಜುವೆಲ್ಲರಿ ತಯಾರಿ, ಪ್ರೇರಕರಾದ ಅಂಜನಾ ಮಹಿಳೆಯರಿಗೆ ಮುತ್ತಿನ ಹಾರ ಬಳೆ ಹಾಗೂ ಕಿವಿ ಓಲೆ ತಯಾರಿ ಮಾಹಿತಿ ನೀಡಿದರು.
ಸಮನ್ವಯಧಿಕಾರಿ ಶೋಭಾ, ಸೇವಾ ಪ್ರತಿನಿಧಿ ಸುನಿತಾ, ಸಂಯೋಜಕಿ ಜಯಲಕ್ಷ್ಮಿ ಉಪಸ್ಥಿತರಿದ್ದರು.