-->


ಜ. 31ರಂದು ” ಮಿಡಲ್ ಕ್ಲಾಸ್ ಫ್ಯಾಮಿಲಿ ” ತುಳು ಸಿನೆಮಾ ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ

ಜ. 31ರಂದು ” ಮಿಡಲ್ ಕ್ಲಾಸ್ ಫ್ಯಾಮಿಲಿ ” ತುಳು ಸಿನೆಮಾ ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ

ಮಂಗಳೂರು: ರೋಹನ್ ಕಾರ್ಪೊರೇಷನ್ ಅರ್ಪಿಸುವ, ವೈಭವ್ ಫಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನೆಂಟ್ ಪ್ರೊಡಕ್ಷನ್, ಎಚ್.ಪಿ.ಆರ್ ಫಿಲ್ಸ್ ಹರಿಪ್ರಸಾದ್ ರೈಯವರ ಸಹಯೋಗದಲ್ಲಿ ಆನಂದ್ ಎನ್. ಕುಂಪಲರವರ ನಿರ್ಮಾಣದಲ್ಲಿ ತಯಾರಾದ ‘ಮಿಡ್ಸ್ ಕ್ಲಾಸ್ ಫ್ಯಾಮಿಲಿ’ ತುಳು ಸಿನಿಮಾ ಜನವರಿ 31 ರಂದು ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ದೇಶಕ ರಾಹುಲ್ ಅಮೀನ್ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಚಿತ್ರ ನಿರ್ಮಾಪಕ ಆನಂದ್ ಎನ್.ಕುಂಪಲ ಮಾತಾಡಿ, “ಪ್ರತಿಯೊಬ್ಬ ತುಳುವರು ಕೂಡ ಒಟ್ಟಾಗಿ ರಾಜ್ ಸೌಂಡ್ಸ್ ಸಿನಿಮಾ ಗೆಲ್ಲಿಸಿದಂತೆಯೇ ಮಿಡ್ಲ್ ಕ್ಲಾಸ್ ಫ್ಯಾಮಿಲಿ ಸಿನಿಮಾವನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಉದ್ಯಮಿ ರೋಹನ್ ಮೊಂತೇರೋ ಮಾತಾಡಿ, ”ನಾನು ಮಿಡ್ಲ್ ಕ್ಲಾಸ್ ಫ್ಯಾಮಿಲಿ ಸಿನಿಮಾವನ್ನು ಅರ್ಪಿಸುತ್ತಿದ್ದೇನೆ. ನಾನು ಎಲ್ಲ ತುಳು ಸಿನಿಮಾವನ್ನು ಮಿಸ್ ಮಾಡದೇ ನೋಡುತ್ತೇನೆ. ಈ ಸಿನಿಮಾದ ಪ್ರೀಮಿಯರ್ ಶೋ ನೋಡಿದ್ದೇನೆ. ಸಿನಿಮಾದ ಕಥೆ ಹಾಸ್ಯ ತುಂಬಾ ಚೆನ್ನಾಗಿದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ“ ಎಂದರು.
ಸಹ ನಿರ್ಮಾಪಕ ಕಿರಣ್ ಶೆಟ್ಟಿ ಮಾತಾಡಿ, “ದುಬೈಯಲ್ಲಿ ಮಿಡ್ಲ್ ಕ್ಲಾಸ್ ಫ್ಯಾಮಿಲಿ ಸಿನಿಮಾದ ಪ್ರೀಮಿಯರ್ ಶೋ ನೋಡಿದ ತುಳುವರು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಅಲ್ಲಿ ಮತ್ತೆ ಹೆಚ್ಚು ಶೋಗಾಗಿ ಡಿಮ್ಯಾಂಡ್ ಬಂದಿದೆ. ಇದು ಸಿನಿಮಾ ಒಳ್ಳೆಯದಿದೆ ಅನ್ನುವುದಕ್ಕೆ ಸಾಕ್ಷಿ“ ಎಂದು ಹೇಳಿದರು.
ನಾಯಕಿ ಸಮತಾ ಅಮೀನ್ ಮಾತಾಡಿ, “ಸಿನಿಮಾ ಖಂಡಿತವಾಗಿಯೂ ತುಳುವರನ್ನು ರಂಜಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ತುಳುವರ ಸಹಕಾರ ಆಶೀರ್ವಾದ ನಮಗೆ ಬೇಕು. ಥಿಯೇಟರ್ ನಲ್ಲಿ ಸಿನಿಮಾ ನೋಡಿ ನಮ್ಮನ್ನು ಗೆಲ್ಲಿಸಿ“ ಎಂದರು.
ಚೈತ್ರಾ ಶೆಟ್ಟಿ ಮಾತಾಡಿ, “ನಾವು ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ತುಳುವರು ನಮ್ಮ ಕೈಹಿಡಿದಲ್ಲಿ ಸಿನಿಮಾ ಖಂಡಿತ ಗೆಲ್ಲಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಗಣೇಶ್ ಕುಂಪಲ, ಅಶ್ವಿನಿ ರಕ್ಷಿತ್, ಭರತ್ ಗಟ್ಟಿ, ಸಾಹಿಲ್ ರೈ, ರಿಷಭ್ ರಾವ್, ಪವನ್ ಕುಮಾರ್, ನಿತಿನ್ ರಾಜ್ ಶೆಟ್ಟಿ, ಸಚಿನ್ ಎಎಸ್ ಉಪ್ಪಿನಂಗಡಿ, ಸುಹಾನ್ ಪ್ರಸಾದ್, ವಿಶಾಲ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರದ ನಾಯಕನಟ ವಿನೀತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಸಿನಿಮಾಸ್ ನಲ್ಲಿ 3 ಪ್ರೀಮಿಯರ್ ಶೋ ನಡೆದಿದ್ದು,
ಪ್ರೇಕ್ಷಕರ ಜನ-ಮನ ಗೆದ್ದು ಬೀಗಿದೆ. ಜನವರಿ 31 ನೇ ತಾರೀಕು ತುಳುನಾಡಿನಾದ್ಯಂತ ಹಾಗೂ ಫೆ.7 ರಂದು UAEಯಲ್ಲಿ ಬಿಡುಗಡೆಯಾಗುತ್ತಿರುವುದು ಹೆಮ್ಮೆಯ ಸಂಗತಿ. ‘ಮಿಡಲ್ ಕ್ಲಾಸ್ ಫ್ಯಾಮಿಲಿ’ ಫೆ.2 ರಂದು ಕೆನಡದಲ್ಲು ತೆರೆಕಾಣಲಿರುವುದು.
ಸಿನಿಮಾ ಕೌಟುಂಬಿಕ ಕಥೆಯನ್ನು ಒಳಗೊಂಡಿದೆ. ಹಾಸ್ಯಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ‘ರಾಜ್ ಸೌಂಡ್ಸ್
ಆ್ಯಂಡ್ ಲೈಟ್ಸ್’ ಸಿನಿಮಾದಂತೆ ಈ ಸಿನಿಮಾ ಕೂಡಾ ತುಳುಚಿತ್ರರಂಗದಲ್ಲಿ ದೊಡ್ಡ ಸೌಂಡ್ ಮಾಡಲಿದೆ. ಈಗಾಗಲೇ ಸಿನಿಮಾದ ಟೈಟಲ್ ಸ್ಟಾಂಗ್, ಟ್ರೇಲರ್ ಸೂಪರ್ ಹಿಟ್ ಆಗಿದೆ. ಜೊತೆಗೆ ಸಿನಿಮಾದ ನಾಯಕ ನಟ ವಿನೀತ್ ಕುಮಾರ್ ಮತ್ತು ನಾಯಕಿ ನಟಿ ಸಮತಾ ಅಮೀನ್ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಲಿದೆ.

ವೀಕ್ಷಕರಿಗೆ ವಿಶೇಷ ಆಫ಼ರ್!
ಮಿಡ್ಲ್ ಕ್ಲಾಸ್ ಸಿನಿಮಾ ವೀಕ್ಷಕರಿಗೆ ರೋಹನ್ ಕಾರ್ಪೋರೇಷನ್ ನ ರೋಹನ್ ಮೊಂತೇರೋ ವಿಶೇಷ ಆಫ಼ರ್ ನೀಡಿದ್ದು ಸಿನಿಮಾ ಬಿಡುಗಡೆಗೊಂಡ ಎರಡು ವಾರಗಳೊಳಗೆ ಸಿನಿಮಾ ನೋಡಿದ ಟಿಕೆಟ್ ಜೊತೆ ಬಂದರೆ ರೋಹನ್ ಕಾರ್ಪೋರೇಷನ್ ನಿರ್ಮಾಣದ ಫ್ಲ್ಯಾಟ್, ಶಾಪ್ ಅನ್ನು ಶೇ.10% ರಿಯಾಯಿತಿ ದರದಲ್ಲಿ ಖರೀದಿ ಮಾಡಲು ಅವಕಾಶವಿದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article