
ತಾ.೩೦ರಂದು ಕಟೀಲಿನಲ್ಲಿ ಶ್ರೀ ದುರ್ಗಾರಾಮೋತ್ಸವ
Wednesday, January 29, 2025
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಬ್ರಹ್ಮಕಲಶೋತ್ಸವದ ವಾರ್ಷಿಕ ದಿನ ಹಾಗೂ ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರತಿಷ್ಟೆಯಾಗಿ ಒಂದು ವರ್ಷವಾದ ಹಿನ್ನಲೆಯಲ್ಲಿ ಕಟೀಲು ರಥಬೀದಿಯಲ್ಲಿ ಜನವರಿ ೩೦ರ ಗುರುವಾರ ಸಂಜೆ ಗಂಟೆ ೫.೩೦ರಿಂದ ಸಹಸ್ರಾರು ಭಜಕರಿಂದ ಕುಣಿತ ಭಜನೆಯೊಂದಿಗೆ ಶ್ರೀ ದುರ್ಗಾ ರಾಮೋತ್ಸವದೊಂದಿಗೆ ದೀಪೋತ್ಸವ ನಡೆಯಲಿದೆ.
ಖ್ಯಾತ ಗಾಯಕ ಶಂಕರ್ ಶ್ಯಾನುಭಾಗ್ ಅವರಿಂದ ಭಕ್ತಿಗಾಯನ ನಡೆಯಲಿದ್ದು, ಮೂವತ್ತಕ್ಕೂ ಹೆಚ್ಚು ತಂಡಗಳ ಸಾವಿರಕ್ಕೂ ಮಿಕ್ಕಿದ ಭಜಕರಿಂದ ಕುಣಿತ ಭಜನೆ ನಡೆಯಲಿದೆ. ಸಂಪ್ರೀತ್ ಶೆಣೈ ಹಾರ್ಮೋನಿಯಂ, ವಿಘ್ನೇಶ್ ಪ್ರಭು ಹಾಗೂ ಅಶ್ವತ್ಥ್ ಶೆಣೈ ತಬಲಾದಲ್ಲಿ ಪಾಂಡುರಂಗ ಭಾಗ್ವತ್ ತಾಳದಲ್ಲಿ ಸಹಕರಿಸಲಿದ್ದಾರೆ.
ರಥಬೀದಿಯಲ್ಲಿ ಸಹಸ್ರಾರು ದೀಪಗಳಿಂದ ಅಲಂಕಾರ ಮಾಡಲಾಗುವುದು. ಕಟೀಲು ದೇವರಿಗೆ ವಿಶೇಷ ರಂಗಪೂಜೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ದೇಗುಲದ ಪ್ರಕಟನೆ ತಿಳಿಸಿದೆ.