ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕರೆ
Wednesday, January 29, 2025
ಮೂಲ್ಕಿ : ಐಕಳ ಪಾಂಪೈ ಕಾಲೇಜಿನಲ್ಲಿ ಫೆ.೮ರಂದು ಶ್ರೀಧರ ಡಿ.ಎಸ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸಿ ಸಮ್ಮೇಳನವನ್ನು ಯಶಸ್ಸುಗೊಳಿಸುವಂತೆ ಪಾಂಪೈ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ.ಫಾ. ಓಸ್ವಾಲ್ಡ್ ಮೊಂತೆರೋ ಸಮ್ಮೇಳನದ ಸಿದ್ಧತಾ ಸಭೆಯಲ್ಲಿ ಹೇಳಿದರು.
ಕಸಾಪ ಮೂಲ್ಕಿ ಘಟಕಾಧ್ಯಕ್ಷ ಮಿಥುನ ಕೊಡೆತ್ತೂರು ಮಾತನಾಡಿ, ಸಮ್ಮೇಳನದಲ್ಲಿ ವಿವಿಧ ಗೋಷ್ಟಿಗಳು, ತಾಲೂಕಿನ ಗ್ರಂಥಪಾಲಕರು, ಹೆಚ್ಚು ಓದುವ ಓದುಗರಿಗೆ ಗೌರವಾರ್ಪಣೆ, ಕೃತಿಗಳ ಬಿಡುಗಡೆ, ಪುಸ್ತಕ ಇತ್ಯಾದಿ ಮಾರಾಟ ಮಳಿಗೆಗಳ ಮೂಲಕ ಆಕರ್ಷಕವಾಗಿ ಸಂಘಟಿಸಲಾಗಿದೆ. ಬಂದವರಿಗೆಲ್ಲರಿಗೂ ಪುಸ್ತಕದ ಕೊಡುಗೆ ನೀಡಲಾಗುವುದು ಎಂದರು.
ಸಮ್ಮೇಳನ ಸಮಿತಿಯ ಪ್ರಥ್ವೀರಾಜ್ ಆಚಾರ್, ಹಿಲ್ಡಾ ಡಿಸೋಜ, ಡಾ. ಪುರುಷೋತ್ತಮ ಕೆ.ವಿ, ಹೆರಿಕ್ ಪಾಯಸ್, ಸ್ವರಾಜ್ ಶೆಟ್ಟಿ, ಜೊಸ್ಸಿಪಿಂಟೋ, ರೋಹನ್ ಡಿಕೋಸ್ತ, ಧನಂಜಯ ಶೆಟ್ಟಿಗಾರ್, ಡಾ. ಯಾದವ ಸಸಿಹಿತ್ಲು, ಡಾ. ವಾಸುದೇವ ಬೆಳ್ಳೆ ಮುಂತಾದವರಿದ್ದರು.