ಸುಮಾರು 6ಕೋ.ರೂ ವೆಚ್ಚದ ನದಿದಂಡೆ ಸಂರಕ್ಷಣಾ ತಡೆಗೋಡೆ ನಿರ್ಮಾಣಕ್ಕೆ ಶಿಲಾನ್ಯಾಸ
Friday, January 24, 2025
ಹಳೆಯಂಗಡಿ : ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಪ್ಪಲ-ಕರಿತೋಟ ನಂದಿನಿ ನದಿಗೆ ಸಣ್ಣ ನೀರಾವರಿ ಇಲಾಖೆ ಯೋಜನೆಯಡಿ ಸುಮಾರು 6 ಕೋಟಿ ವೆಚ್ಚದ ನದಿ ದಂಡೆ ಸಂರಕ್ಷಣಾ ತಡೆಗೋಡೆ ನಿರ್ಮಾಣಕ್ಕೆ ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಗುರುವಾರದಂದು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭ ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ, ಸದಸ್ಯರಾದ ಅಬ್ದುಲ್ ಅಜೀಜ್, ಶಶಿಕಲಾ, ನಾಗರಾಜ್, ವಿನೋದ್ ಕುಮಾರ್,ಅಶೋಕ್ ಬಂಗೇರ, ,ಸವಿತಾ, ಅಬ್ದುಲ್ ಖಾದರ್, ಸುಖೇಶ್ ಪಾವಂಜೆ, ಧನರಾಜ್ ಕೋಟ್ಯಾನ್, ಅಶ್ವಿನ್,ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್ ಕೊಳುವೈಲು, ಪಡುಪಣಂಬೂರು ಗ್ರಾ.ಪಂ.ಅಧ್ಯಕ್ಷೆ ಕುಸುಮಾ ಚಂದ್ರಶೇಖರ್, ಉಪಾಧ್ಯಕ್ಷ ಹೇಮನಾಥ ಅಮೀನ್,
ಪ್ರಮುಖರಾದ ಜೀವನ್ ಪ್ರಕಾಶ್, ವಿನೋದ್ ಬೊಳ್ಳೂರು, ಶ್ಯಾಮ್ ಪ್ರಸಾದ್, ಲಕ್ಷ್ಮಣ್ ಸಾಲ್ಯನ್ ಪುನರೂರು,ಮೋಹನ್ ಸುವರ್ಣ, ಮನೋಜ್, ದಿನೇಶ್ ಚೇಳಾಯರು, ರಾಘು ದೇವಾಡಿಗ, ಯೋಗೀಶ್ ಪಾವಂಜೆ,ಲೋಹಿತ್ ತೋಕೂರು ಗುತ್ತಿಗೆದಾರ ಸುನಿತ್ ಹೆಗ್ಡೆ ಕುಂದಾಪುರ ಮತ್ತಿತರರು ಉಪಸ್ಥಿತರಿದ್ದರು