ಇಂದಿನಿಂದ ಗುರುಪುರ ಗೋಳಿದಡಿಗುತ್ತಿನವರ್ಷದ `ಗುತ್ತುದ ಪರ್ಬೊ'
Sunday, January 19, 2025
ಕೈಕಂಬ:ಗುರುಪುರ ಗೋಳಿದಡಿಗುತ್ತುವಿನ ಸಮೀಪ ಫಲ್ಗುಣಿ ನದಿ ತಟದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಗುರು ಮಹಾಕಾಲೇಶ್ವರ ದೇವರ ಬೃಹತ್ ಏಕಶಿಲಾ ಮೂರ್ತಿಗೆ ಮುಂಬರುವ ಹೊಸ ಸಂವತ್ಸರದ ಆದಿ ಭಾಗದಲ್ಲಿ ಬ್ರಹ್ಮಕಲಶ ಪ್ರತಿಷ್ಠಾ ಸಂಭ್ರಮ ನಡೆಯಲಿರುವುದರಿಂದ ಗೋಳಿದಡಿಗುತ್ತಿನಲ್ಲಿ ಇಂದು ಮತ್ತು ನಾಳೆ(ಜ. 20) ಸರಳ ಹಾಗೂ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ವಾರ್ಷಿಕ `ಗುತ್ತುದ ಪರ್ಬೊ' ನಡೆಯಲಿದೆ.
ಜ. 19ರಂದು ಸಂಜೆ 7ರಿಂದ ಶ್ರೀ ಕ್ಷೇತ್ರ ಪಾವಂಜೆ ಮೇಳದವರಿಂದ `ಶ್ರೀ ದೇವಿ ಮಹಾತ್ಮೆ' ಕಾಲಮಿತಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಜ. 20ರಂದು ಸಂಜೆ 6ರಿಂದ 8ರವರೆಗೆ ಕುದ್ರೋಳಿ ಗಣೇಶ್ ಹಾಗೂ ಬಳಗದವರಿಂದ ವಿಸ್ಮಯ ಜಾದೂ, ರಾತ್ರಿ 8:30ರಿಂದ 10:30ರವರೆಗೆ ದಕ್ಷಿಣ ಭಾರತದ ಮಹಮ್ಮದ್ ರಫಿ ಎಂದೇ ಖ್ಯಾತರಾದ ಠಾಗೋರ್‍ದಾಸ್ ಇವರಿಂದ `ಏಕ್ ಶಾಮ್ ರಫೀಕೆ ನಾಮ್' ರಸಮಂಜರಿ ನಡೆಯಲಿದೆ. ಈ ಎರಡೂ ದಿನ ಗೋಳಿದಡಿಗುತ್ತಿನಲ್ಲಿ ಶ್ರೀ ವೈದ್ಯನಾಥಾದ್ಯ ಪಂಚದೇವತೆಗಳ ಆರಾಧನೆ, ಭಜನಾ ಸತ್ಸಂಗ, ಸಾಂಸ್ಕøತಿಕ ಕಾರ್ಯಕ್ರಮ, ನಿರಂತರ ಊಟೋಪಚಾರ ಮತ್ತು ಅತಿಥಿ ಸತ್ಕಾರ ನಡೆಯಲಿದೆ ಎಂದು ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ತಿಳಿದ್ದಾರೆ.