-->


ಶ್ರೀ ಕ್ಷೇತ್ರ ಉಳೆಪಾಡಿಯಲ್ಲಿ ಧನು ಪೂಜಾ ಸಂಪನ್ನೋತ್ಸವ

ಶ್ರೀ ಕ್ಷೇತ್ರ ಉಳೆಪಾಡಿಯಲ್ಲಿ ಧನು ಪೂಜಾ ಸಂಪನ್ನೋತ್ಸವ


 

ಕಿನ್ನಿಗೋಳಿ:ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಾಮ್ಮಾಯಿ ದೇವಾಲಯದಲ್ಲಿ ಒಂದು ತಿಂಗಳ ಕಾಲ ನೆರವೇರಿದ ಧನು ಪೂಜೆಯ ಸಂಪನ್ನೋತ್ಸವ ಮತ್ತು ಮಕರ ಸಂಕ್ರಾಂತಿ ಪ್ರಯುಕ್ತ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ - ಶನಿಪೂಜೆ ಮತ್ತು ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ಮಹಮ್ಮಾಯಿ ದೇವರ ಬಲಿ ಸೇವಾದಿಗಳು ವಿಜೃಂಭಣೆಯಿಂದ ನೆರವೇರಿತು.
        ವೇದಮೂರ್ತಿ ಶ್ರೀ ರಮಾನಾಥ ಭಟ್ ಮುಲ್ಕಿ ಇವರ ನೇತೃತ್ವದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಊರ ಪರವೂರ ಅಪಾರ ಭಕ್ತರು ಆಗಮಿಸಿ ಶ್ರೀ ದೇವರ ಗಂಧ ಪ್ರಸಾದಾದಿಗಳನ್ನು ಸ್ವೀಕರಿಸಿದರು.
        ದೇವಾಲಯದ ಧರ್ಮದರ್ಶಿ ಮೋಹನದಾಸ ಸುರತ್ಕಲ್‌ರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಲ್ಕಿ ಆರಕ್ಷಕ ಠಾಣೆ ಅಧಿಕಾರಿ ವರ್ಗದವರು, ಭುಜಂಗ ಶೆಟ್ಟಿ ಮುಂಬೈ, ಸುಧಾಕರ ಮೆಸ್ಕಾಂ, ಶ್ರೀಮತಿ ಚೇತನಾ ಮೋಹನದಾಸ, ಭೋಜ ದೇವಾಡಿಗ ಕಿಲ್ಪಾಡಿ, ವಿಟ್ಟಪ್ಪ ಗೌಡ ಪೆರ್ಮುದೆ, ಭೋಜ ಸಾಲ್ಯಾನ್, ಶಾಂತಿ ಕೊಪ್ಪಳ, ತಿಲಕ ದೇವಾಡಿಗ, ಭರತ್ ಆಚಾರ್ಯ, ಶ್ರೀಮತಿ ವಿದ್ಯಾ ಗುತ್ತಕಾಡು,ಶ್ರೀಮತಿ ಹೇಮಲತಾ ಟೀಚರ್ ಎಣ್ಣೆಗೇಣಿ ಮೊದಲಾದವರು ಭಾಗವಹಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article