ಗಲಾಟೆ ಸಂಸಾರದ ಪ್ರೋಮೋ ಬಿಡುಗಡೆ : ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಸಿಗಲಿ : ವಸಂತ ಬೆರ್ನಾಡ್
Sunday, January 12, 2025
ಮಂಗಳೂರು : ಗ್ರಾಮೀಣ ಪ್ರತಿಭೆಗಳಿಗೆ ಮುಕ್ತವಾಗಿ ನೆರವನ್ನು ನೀಡುತ್ತಾ ಅವರಿಗೆ ಪ್ರೋತ್ಸಾಹ ನೀಡುವಂತಹ ವಾತಾವರಣ ನಿರ್ಮಾಣವಾಗಬೇಕು, ಹೊಸ ಹೊಸ ಚಿಂತನೆಗಳ ಯೋಜನೆಗಳಿಗೆ ವೇದಿಕೆ ನೀಡಬೇಕು ಎಂದು ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್.ವಸಂತ ಬೆರ್ನಾಡ್ ಹೇಳಿದರು.
ಅವರು ಹಳೆಯಂಗಡಿಯ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಕಚೇರಿಯಲ್ಲಿ ಶ್ರೀಗುರುನಮನಸಂತೃಪ್ತಿ ಪ್ರೋಡಕ್ಷನ್ ಹೌಸ್‌ನ ಗಲಾಟೆ ಸಂಸಾರ ಕನ್ನಡ ಧಾರವಾಹಿಯ ಪ್ರಥಮ ಪ್ರೋಮೋವನ್ನು ಅನಾವರಣಗೊಳಿಸಿ ಶುಭ ಹಾರೈಸಿದರು.
ಧಾರಾವಾಹಿಯ ನಿರ್ದೇಶಕ ದೇವಿಪ್ರಕಾಶ್ ಧಾರಾವಾಹಿಯ ಬಗ್ಗೆ ಮಾಹಿತಿ ನೀಡಿದರು.
ಸೊಸೈಟಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸುದರ್ಶನ್ ಶುಭ ಹಾರೈಸಿದರು.
ಛಾಯಾಗ್ರಾಹಕ ಹರೀಶ್ ಪಿ. ಕೋಟ್ಯಾನ್ ಪಡುಪಣಂಬೂರು, ಪಿಆರ್‌ಒ ರೋಶನ್ ಡಿಕ್ರೂಜ್, ಕಲಾವಿದ ಧರ್ಮಾನಂದ ಶೆಟ್ಟಿಗಾರ್ ತೋಕೂರು ಉಪಸ್ಥಿತರಿದ್ದರು.
ಕಲಾವಿದ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.