ಪ್ರವಾಸೋಧ್ಯಮ ಅಭಿವೃದ್ಧಿಗೆ ಉತ್ತೇಜನ - ಶಾಸಕ ಡಾ.ಭರತ್ ಶೆಟ್ಟಿ
Monday, January 13, 2025
ಮಂಗಳೂರು: ತಣ್ಣೀರುಬಾವಿಯಲ್ಲಿ ಆಯೋಜಿಸಲಾದ ಬೀಚ್ ಉತ್ಸವ ಪ್ರವಾಸೋಧ್ಯಮಕ್ಕೆ ಉತ್ತೇಜನ ಸಿಗುವಂತಾಗಲಿ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು.
ತಣ್ಣೀರುಬಾವಿಯಲ್ಲಿ ಆಯೋಜಿಸಲಾದ ಬೀಚ್ ಫೆಸ್ಟ್ ನಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಿಲ್ಲಾಡಳಿತ ಕರಾವಳಿ ಉತ್ಸವವನ್ನು ಅತ್ಯಂತ ಶಿಸ್ತು ಬದ್ದವಾಗಿ ಆಯೋಜಿಸಿದ್ದಾರೆ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸಹಿತ ಅಧಿಕಾರಿ ವರ್ಗ ಅಭಿನಂದನೆಗೆ ಪಾತ್ರರು ಎಂದರು.
ರೋಹನ್ ಕಾರ್ಪೋರೇಷನ್ ಆಡಳಿತ ನಿರ್ದೇಶಕ ರೋಹನ್ ಮೊಂತೆರೋ ಮಾತನಾಡಿ,
ಮಂಗಳೂರು ನಮಗೆ ಎಲ್ಲವೂ ಕೊಟ್ಟಿದೆ.ನಾವೂ ಏನನ್ನಾದರೂ ಕೊಡಬೇಕು.
ವಿಶ್ವ ಭೂಪಟದಲ್ಲಿ ಗುರುತಿಸುವಂತಾಗಬೇಕು ಎಂದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್,ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್, ಮುಡಾ ಆಯುಕ್ತೆ ನೂರ್ ಜಹಾರ,ಕ್ರೆಡೈ ನ ವಿನೋದ್ ಪಿಂಟೋ,ಆರ್ ಟಿಒ ಅಧಿಕಾರಿ ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.