ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಖ್ಯಾತ ಸಾಹಿತಿ ಎಸ್. ಎಲ್. ಭೈರಪ್ಪ ಭೇಟಿ
Sunday, January 12, 2025
ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಖ್ಯಾತ ಸಾಹಿತಿ ಎಸ್. ಎಲ್. ಭೈರಪ್ಪ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು. ಭೈರಪ್ಪ ಅವರನ್ನು ಅರ್ಚಕರಾದ ಪ್ರಸಾದ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ ದೇವರ ಶೇಷ ವಸ್ತ್ರ ಪ್ರಸಾದ, ಸ್ಮರಣಿಕೆ ನೀಡಿ ಗೌರವಿಸಿದರು. ಖ್ಯಾತ ಸಾಹಿತಿ ಸಹನಾ ವಿಜಯಕುಮಾರ್, ದುರ್ಗಾ ರಾಮದಾಸ್ ಕಟೀಲು, ಮೂಲ್ಕಿ ಕಸಾಪ ಘಟಕದ ಮಿಥುನ್, ಪಾಂಡುರಂಗ ಭಟ್, ಪುರುಷೋತ್ತಮ ಕೋಟ್ಯಾನ್, ರವೀಂದ್ರ ಅತ್ತೂರು ಮತ್ತಿತರರಿದ್ದರು.