ನೂತನ ವಿಶ್ರಾಂತಿ ಧಾಮ, ಕಚೇರಿ ಮತ್ತು ಶಾಶ್ವತ ಚಪ್ಪರ ಲೋಕಾರ್ಪಣೆ
Monday, January 20, 2025
ಬಜಪೆ: ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡು ಪೆರಾರದಲ್ಲಿ ಹಿಂದೂ ರುದ್ರ ಭೂಮಿ ನಿರ್ವಹಣಾ ಸಮಿತಿಯ ನೇತೃತ್ವದಲ್ಲಿ ವಿವಿಧ ಅನುದಾನಗಳ ಅಂದಾಜು 30 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ವಿಶ್ರಾಂತಿ ಧಾಮ, ಕಚೇರಿ ಮತ್ತು ಶಾಶ್ವತ ಚಪ್ಪರವನ್ನು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಅವರು ಭಾನುವಾರದಂದು ಲೋಕಾರ್ಪಣೆ ಗೊಳಿಸಿದರು.
ರುದ್ರಭೂಮಿ ನಿರ್ವಹಣಾ ಸಮಿತಿಯ ಅಧ್ಯಕ್ಷ ಭಾಸ್ಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭ ಮಂಗಳೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ,
ಪಡು ಪೆರಾರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಗೌಡ,
ಮೂಡಬಿದ್ರಿ ತಾಲೂಕು ಪಂಚಾಯತ್ ಪ್ರಭಾರ ಸಹಾಯಕ ನಿರ್ದೇಶಕ ಸಾಯಿಶ್ ಚೌಟ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೃಷ್ಣ ಅಮೀನ್, ವಾಸ್ತು ತಜ್ಞ ರವಿಶಂಕರ್ ನೂಯಿ, ಯಶವಂತ ಪೂಜಾರಿ ಮುಂಡಬೆಟ್ಟು,ಪದ್ಮನಾಭ ಪೂಜಾರಿ, ರಂಗನಾಥ ಭಂಡಾರಿ ಮುಂಡಬೆಟ್ಟು ಗುತ್ತು ಕೈಕಂಬ ಮಂಜುನಾಥ ರೈಸ್ ಮಿಲ್ ಮಾಲಕ ಸನತ್ ಸೆಮಿತ, ಪಡುಪೆರಾರ ಪಂಚಾಯತ್ ಸದಸ್ಯ ನೂರ್ ಅಹಮ್ಮದ್ ,
ಪಡು ಪೆರಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಗ್ಗಪ್ಪ ಮೂಲ್ಯ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಅಮಿತಾ ಮೋಹನ್ ಶೆಟ್ಟಿ, ವಿದ್ಯಾ ಜೋಗಿ, ದೇವಪ್ಪ ಶೆಟ್ಟಿ, ಸುಜಾತ, ಗಣೇಶ್ ಮತ್ತು ಮೋಹನ ಬಂಗೇರ ಹಾಗೂ ಮೊದಲಾದವರು. ಉಪಸ್ಥಿತರಿದ್ದರು.
ರುದ್ರಭೂಮಿಯಲ್ಲಿ ಶವ ಸಂಸ್ಕಾರ ಕಾರ್ಯ ನಿರ್ವಹಿಸುವ ಶಂಕರ ಮತ್ತು ಸಮಿತಿಯ ಕಾರ್ಯದರ್ಶಿ ಪದ್ಮನಾಭ ಪೂಜಾರಿಯವರನ್ನು ವೇದಿಕೆಯಲ್ಲಿ ಶಾಲು ಹೊದೆಸಿ, ಪೇಟ ತೊಡಿಸಿ ಗೌರವಿಸಲಾಯಿತು. ಪದ್ಮನಾಭ ಪೂಜಾರಿ ವರದಿ ಮಂಡಿಸಿದರು.
ಸಮಿತಿಯ ಕೋಶಾಧಿಕಾರಿ ಸುರೇಶ್ ಅಂಚನ್ ಸ್ವಾಗತಿಸಿ, ನಿರೂಪಿಸಿದರು.