ಗುರುಪುರ ಗೋಳಿದಡಿಗುತ್ತಿನ ಮನೆಯಲ್ಲಿ ವಾರ್ಷಿಕ `ಗುತ್ತುದ ವರ್ಷದ ಪರ್ಬೊ' ಆರಂಭ
Monday, January 20, 2025
ಗುರುಪುರ ಗೋಳಿದಡಿಗುತ್ತಿನ ಮನೆಯಲ್ಲಿ ಜ. 19ರಂದು ವಾರ್ಷಿಕ `ಗುತ್ತುದ ವರ್ಷದ ಪರ್ಬೊ'ವು ಶ್ರೀ ವೈದ್ಯನಾಥಾದ್ಯ ಪಂಚದೇವತೆಗಳ ಆರಾಧನೆ, ಭಜನಾ ಸತ್ಸಂಗದೊಂದಿಗೆ ವಾರ್ಷಿಕ `ಗುತ್ತುದ ವರ್ಷದ ಪರ್ಬೊ' ಆರಂಭಗೊಂಡಿತು.
ಹೊಸ ಸಂವತ್ಸರದ(ವಿಶ್ವಾವಸು) ಆದಿ ಭಾಗದಲ್ಲಿ ಗೋಳಿದಡಿಗುತ್ತಿನ ಹತ್ತಿರದಲ್ಲಿ, ಫಲ್ಗುಣಿ ನದಿ ತಟಾಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಗುರು ಮಹಾಕಾಲೇಶ್ವರ ದೇವರ ಬೃಹತ್ ಏಕಶಿಲಾ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಇರುವುದರಿಂದ ಈ ವರ್ಷ ಜ. 19 ಮತ್ತು 20ರಂದು ಗುತ್ತುದ ವರ್ಷದ ಪರ್ಬೊ ಅತ್ಯಂತ ಸರಳ ರೀತಿಯಲ್ಲಿ ನಡೆಯುತ್ತಿದೆ. ಶನಿವಾರ ಸಂಜೆ ಚಪ್ಪರ ಮುಹೂರ್ತ ಮತ್ತು ಉಗ್ರಾಣ ಮುಹೂರ್ತ ನಡೆದ ಬಳಿಕ ಅನ್ನಛತ್ರದಲ್ಲಿ ನಿರಂತರ ಊಟೋಪಚಾರ ಆರಂಭಗೊಂಡಿದೆ.
ಗುತ್ತಿನ ಮನೆಯಲ್ಲಿ ಬೆಳಿಗ್ಗೆ ಪಾವಂಜೆಯ ಗುರು ಭಟ್ ಅವರ ಪೌರೋಹಿತ್ಯದಲ್ಲಿ ಗಣಹೋಮ ನಡೆಯಿತು. ಗುತ್ತಿನ ಯಜಮಾನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ, ಪತ್ನಿ ಉಷಾ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಹಾಗೂ ಪುತ್ರಿಯರು ಶ್ರೀ ದೇವರ ಪೂಜೆ ನೆರವೇರಿಸಿದರು. ಮಧ್ಯಾಹ್ನದ ಅನ್ನ ದಾಸೋಹದಲ್ಲಿ ನೂರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಸಂಜೆ 7ರಿಂದ ಶ್ರೀ ಕ್ಷೇತ್ರ ಪಾವಂಜೆ ಮೇಳದವರಿಂದ `ಶ್ರೀ ದೇವಿ ಮಹಾತ್ಮೆ' ಕಾಲಮಿತಿ ಯಕ್ಷಗಾನ ಪ್ರದರ್ಶನಗೊಂಡಿತು.
ಜ. 20ರಂದು ಬೆಳಿಗ್ಗೆ ಶ್ರೀ ವೈದ್ಯನಾಥಾದ್ಯ ಪಂಚದೇವತೆಗಳ ಆರಾಧನೆ, ಭಜನಾ ಸತ್ಸಂಗ, ನಿರಂತರ ಊಟೋಪಚಾರ ಮತ್ತು ಅತಿಥಿ ಸತ್ಕಾರ ನಡೆಯಲಿದೆ. ಸಂಜೆ 6ರಿಂದ 8ರವರೆಗೆ ಕುದ್ರೋಳಿ ಗಣೇಶ್ ಹಾಗೂ ಬಳಗದವರಿಂದ ವಿಸ್ಮಯ ಜಾದೂ, ರಾತ್ರಿ 8:30ರಿಂದ 10:30ರವರೆಗೆ ದಕ್ಷಿಣ ಭಾರತದ ಮಹಮ್ಮದ್ ರಫಿ ಎಂದೇ ಖ್ಯಾತರಾದ ಠಾಗೋರ್‍ದಾಸ್ ಇವರಿಂದ `ಏಕ್ ಶಾಮ್ ರಫೀಕೆ ನಾಮ್' ರಸಮಂಜರಿ ನಡೆಯಲಿದೆ. ಶ್ರೀ ವೈದ್ಯನಾಥಾದ್ಯ ಪಂಚದೇವತೆಗಳ ಆರಾಧನೆ, ಭಜನಾ ಸತ್ಸಂಗ, ಸಾಂಸ್ಕøತಿಕ ಕಾರ್ಯಕ್ರಮ, ನಿರಂತರ ಊಟೋಪಚಾರ ಮತ್ತು ಅತಿಥಿ ಸತ್ಕಾರ ನಡೆಯಲಿದೆ.