ಎಕ್ಕಾರು:ಸಾಂಪ್ರದಾಯಿಕ ಪೂಕರೆ ಕಂಬಳ ಸಂಪನ್ನ
Thursday, December 26, 2024
ಬಜಪೆ:ಅತೀ ಪುರಾತನವಾದ ಹಾಗೂ ಸುಗ್ಗಿ ಬೆಳೆಯ ಪ್ರಾರಂಭದಲ್ಲಿ ಆಚರಿಸುವ ಎಕ್ಕಾರು ಶ್ರೀ ಕೊಡಮಣಿತ್ತಾಯ ಕ್ಷೇತ್ರಕ್ಕೆ ಸಂಬಂಧಿಸಿದ ಪೂಕರೆ ಕಂಬಳವು ಎಕ್ಕಾರು ಶ್ರೀ ಕೊಡಮಣಿತ್ತಾಯ ಕ್ಷೇತ್ರದ ಶ್ರೀ ದೈವಗಳ ಭಂಡಾರ ಮನೆಯಾದ ಎಕ್ಕಾರು ಕಾವರ ಮನೆಯ ಮುಂಭಾಗದ ಕಂಬಳದ ಗದ್ದೆಯಲ್ಲಿ ಧಾರ್ಮಿಕ ಪ್ರಕ್ರಿಯೆಗಳೊಂದಿಗೆ ಸಾಂಪ್ರದಾಯಿಕವಾಗಿ ಬುಧವಾರದಂದು ನಡೆಯಿತು.
ಈ ಸಂದರ್ಭ ಎಕ್ಕಾರು ಶ್ರೀಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರ ಮನೆ(ತಿಮ್ಮ ಕಾವರು),ರತ್ನಾಕರ ಶೆಟ್ಟಿ ಬಡಕರೆ ಬಾಳಿಕೆ,ಸಂಪತ್ ಮುದ್ದ ನಡ್ಯೋಡಿಗುತ್ತು,ಪ್ರಮುಖರಾದ ಮೋನಪ್ಪ ಶೆಟ್ಟಿ ಎಕ್ಕಾರು,ಎಕ್ಕಾರು ಗ್ರಾ.ಪಂ ಅಧ್ಯಕ್ಷ ಪ್ರವೀಣ್ ಆಚಾರ್ಯ,ಮಾಜಿ ತಾ.ಪಂ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಎಕ್ಕಾರು,ಗ್ರಾ.ಪಂ ಸದಸ್ಯ ಸುದೀಪ್ ಅಮೀನ್ ,ಪ್ರಮುಖರುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.