ತಾ.೨೮-೨೯: ಕಟೀಲು ಶ್ರೀ ದುರ್ಗಾಮಕ್ಕಳ ಮೇಳದ ಕಲಾಪರ್ವ
Wednesday, December 25, 2024
ಕಟೀಲು : ಯಕ್ಷಗಾನ ಹಿಮ್ಮೇಳ, ಮುಮ್ಮೇಳ, ಅರ್ಥಗಾರಿಕೆ ತರಗತಿಗಳನ್ನು ಕಳೆದ ಹದಿನಾರು ವರುಷಗಳಿಂದ ನಡೆಸುತ್ತ ಬಂದಿರುವ ಕಟೀಲಿನ ಶ್ರೀ ದುರ್ಗಾಮಕ್ಕಳ ಮೇಲದ ವಾರ್ಷಿಕ ಕಲಾಪರ್ವ ಡಿಸೆಂಬರ್ ೨೮ ಮತ್ತು ೨೯ರಂದು ನಡೆಯಲಿದೆ ಎಂದು ಮೇಳದ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ ತಿಳಿಸಿದ್ದಾರೆ.
ತಾ. ೨೮ರ ಶನಿವಾರ ಬೆಳಿಗ್ಗೆ ಕಲಾಪರ್ವವನ್ನು ಯಕ್ಷಲಹರಿ ಅಧ್ಯಕ್ಷ ರಘುನಾಥ ಕಾಮತ್ ಉದ್ಘಾಟಿಸಲಿದ್ದಾರೆ. ಮಕ್ಕಳ ಮೇಳದ ಕಲಾವಿದರಿಂದ ಚೌಕಿಪೂಜೆ, ಕೋಡಂಗಿ, ಬಾಲಗೋಪಾಲ ಮುಖ್ಯ ಸ್ತ್ರೀವೇಷ. ಷಣ್ಮುಖ ಸುಬ್ರಾಯ, ರಂಗಾರಂಗಿ, ಹನೂಮಂತನ ಒಡ್ಡೋಲಗ, ಕೃ?ನ ಒಡ್ಡೋಲಗ, ಕೋಲಾಟ, ರಾಮನ ಒಡ್ಡೋಲಗ, ಗಾನವೈಭವ, ಯಕ್ಷಗಾನ -’ಪುರುಷಮೃಗ’ ಹಾಗೂ ಸುದರ್ಶನ ವಿಜಯ ಪ್ರದರ್ಶನಗೊಳ್ಳಲಿದೆ. ಸಂಜೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಯಕ್ಷಗಾನ ಗುರುಗಳಿಗೆ ವಂದನೆ, ಮೇಳದ ಕಲಾವಿದರಿಗೆ ಪ್ರತಿಭಾ ಪುರಸ್ಕಾರ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಉಮಾನಾಥ ಕೋಟ್ಯಾನ್, ಕಲ್ಲಾಡಿ ದೇವೀಪ್ರಸಾದ ಶೆಟ್ಟಿ ಮುಂತಾದ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ.
ತಾ. ೨೯ರ ಭಾನುವಾರ ಚೌಕಿಪೂಜೆ, ಅರ್ಧನಾರೀಶ್ವರ, ಚಂದಭಾಮ, ಚಪ್ಪರಮಂಚ, ಬಣ್ಣದವೇ?ದ ಒಡ್ಡೋಲಗ, ತಾಳಮದ್ದಲೆ - ’ಪಾರ್ಥ ಸಾರಥ್ಯ’, ಕಿರಾತನ ಒಡ್ಡೋಲಗ, ಹೆಣ್ಣುಬಣ್ಣದ ಒಡ್ಡೋಲಗ, ಪೀಠಿಕಾ ಸ್ತ್ರೀವೇ?, ಯಕ್ಷಗಾನ - ಪಟ್ಟಾಭಿಷೇಕ, ಪಾದುಕಾಪ್ರದಾನ, ಅಗ್ರಪೂಜೆ ಹಾಗೂ ಕಿರಾತಾರ್ಜುನ ಪ್ರದರ್ಶನಗೊಳ್ಳಲಿದೆ. ಅಂದು ನಡೆಯುವ ಸಭಾಕಾರ್ಯಕ್ರಮದಲ್ಲಿ ಕೊಂಡೇವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಯಕ್ಷಗಾನ ಅಕಾಡಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಮುಂತಾದ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಪ್ರಶಸ್ತಿ
ಖ್ಯಾತ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ಟರಿಗೆ ಶ್ರೀ ದುರ್ಗಾ ಮಕ್ಕಳ ಮೇಳದ ಪ್ರಶಸ್ತಿ, ಯಕ್ಷಗಾನ ವಿದ್ವಾಂಸ ಕೆ.ಎಲ್.ಕುಂಡಂತಾಯರಿಗೆ ಕಟೀಲು ಸದಾನಂದ ಆಸ್ರಣ್ಣ ಪ್ರಶಸ್ತಿ, ಖ್ಯಾತ ಹಿಮ್ಮೇಳ ವಾದಕ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿಗಳಿಗೆ ಕಟೀಲು ಕೃಷ್ಣ ಆಸ್ರಣ್ಣ ಪ್ರಶಸ್ತಿ, ಯಕ್ಷಗಾನದ ಸವ್ಯಸಾಚಿ ರಾಮಪ್ರಕಾಶ ಕಲ್ಲೂರಾಯರಿಗೆ ಶ್ರೀನಿಧಿ ಆಸ್ರಣ್ಣ ಪ್ರಶಸ್ತಿ ನೀಡಿ ಗೌರವಿಸಲಾಗುವುದು.