ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಲೋಕಾರ್ಪಣೆ ,ಕುಂಭಾಭಿಷೇಕ
Thursday, December 26, 2024
ಕಟೀಲು:ಬಿಲ್ಲವ ಸಮಾಜ ಸೇವಾ ಸಂಘ (ರಿ)ಕಟೀಲು ಇಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ನೂತನ ಮಂದಿರದ ಲೋಕಾರ್ಪಣೆ ,ಬಿಂಬಪ್ರತಿಷ್ಠೆ ಹಾಗೂ ಕುಂಭಾಭಿಷೇಕವು ಬುಧವಾರಂದು ಕೇರಳ ವರ್ಕಳ ಶಿವಗಿರಿ ಮಠದ ಶ್ರೀಮನೋಜ್ ತಂತ್ರಿಯವರ ಉಪಸ್ಥಿತಿಯಲ್ಲಿ ಹೆಜಮಾಡಿಯ ಮಹೇಶ ಶಾಂತಿಯವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಶ್ರೀ ವಿಖ್ಯಾತನಂದ ಸ್ವಾಮೀಜಿಯವರು ಅನುಗ್ರಹ ಸಂದೇಶವನ್ನು ನೀಡಿದರು.
ಬಿಲ್ಲವ ಸಮಾಜ ಸೇವಾ ಸಂಘ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಲೋಕಾರ್ಪಣೆ ಬಿಂಬ ಪ್ರತಿಷ್ಠಾಪನಾ ಸಮಿತಿಗಳ ಅಧ್ಯಕ್ಷರು,ಗೌರವಾಧ್ಯಕ್ಷರು,ಪದಾಧಿಕರಿಗಳು ಮತ್ತು ಸರ್ವ ಸದಸ್ಯರು ,ಕಟೀಲು, ನಡುಗೋಡು,ಮೆನ್ನಬೆಟ್ಟು,ಕಿಲೆಂಜೂರು ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.