ಪ್ರಿಯದರ್ಶಿನಿ ಗ್ರಾಂಡ್ ಫಿನಾಲೆ ಮುಂದೂಡಿಕೆ
Friday, December 27, 2024
ಹಳೆಯಂಗಡಿ:ಡಿಸೆಂಬರ್ 29ರಂದು ಹಳೆ ಅಂಗಡಿ ಹರಿ ಓಂ ಸಭಾಭವನದಲ್ಲಿ ನಡೆಯಲಿದ್ದ ಪ್ರಿಯದರ್ಶಿನಿ ಗ್ರಾಂಡ್ ಫಿನಾಲೆ ಕಾರ್ಯಕ್ರಮವು ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದಿಂದಾಗಿ ಮುಂದೂಡಲ್ಪಟ್ಟಿದೆ.
ಕರ್ನಾಟಕ ಸರಕಾರವು ಈ ಹಿನ್ನೆಲೆಯಲ್ಲಿ ಏಳು ದಿನ ಶೋಕಾಚರಣೆ ಆಚರಿಸಿರುವುದರಿಂದ ಈ ಕಾರ್ಯಕ್ರಮವನ್ನು ಜನವರಿ 5ನೇ ತಾರೀಕಿನಂದು ಅದೇ ಸ್ಥಳದಲ್ಲಿ ಅದೇ ಸಮಯದಲ್ಲಿ ನಡೆಸಲಾಗುವುದೆಂದು ಸಂಘಟಕರು ಪತ್ರಿಕಾ ಪ್ರಕಟಣೆ ನೀಡಿರುತ್ತಾರೆ.