'ತೋಕೂರು ಮಹಿಮೆಯ ಮಾಣಿಕ್ಯ ' ಕನ್ನಡ ಭಕ್ತಿಗೀತೆ ಛಾಯಾಚಿತ್ರದ ಬಿತ್ತಿಪತ್ರದ ಬಿಡುಗಡೆ
Monday, December 2, 2024
ಕಿನ್ನಿಗೋಳಿ :ತೋಕೂರು ಮಹಿಮೆಯ ಮಾಣಿಕ್ಯ ' ಕನ್ನಡ ಭಕ್ತಿಗೀತೆ ಛಾಯಾಚಿತ್ರದ ಬಿತ್ತಿಪತ್ರದ ಬಿಡುಗಡೆಯು ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆದಿತ್ಯವಾರದಂದು ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುರಾಜ್ ಎಸ್ ಪೂಜಾರಿ ಅವರು ಬಿಡುಗಡೆಗೊಳಿಸಿದರು.
ಸಂಧ್ಯಾ ಗಣೇಶ್ ಪೂಜಾರಿ ಬೆಂಗಳೂರು ಇವರ ನಿರ್ಮಾಣದಲ್ಲಿ ಮೂಡಿಬಂದಿರುವ ಕನ್ನಡ ಭಕ್ತಿಗೀತೆಗೆ ಸುಪ್ರೀತಾ ರಂಗನಾಥ್ ತೋಕೂರು ಇವರ ಸಾಹಿತ್ಯದಲ್ಲಿ ಶ್ರೀಜಲ್ ಜೆ ಪೂಜಾರಿ ಗಾಯನದಲ್ಲಿ ಗುರು ಬಾಯಾರ್ ಇವರ ಸಂಗೀತದಲ್ಲಿ ಮೂಡಿಬಂದಿದೆ.
ಈ ಸಂದರ್ಭ ದೇವಳದ ಪ್ರಧಾನ ಅರ್ಚಕ ಮಧುಸೂದನ್ ಆಚಾರ್ಯ,ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಹರಿದಾಸ್ ಭಟ್ ತೋಕೂರು,ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪುರುಷೋತ್ತಮ ಕೋಟ್ಯಾನ್ ,ಆಶೋಕ್ ಕುಂದರ್,ಸವಿತಾ ಶರತ್ ಬೆಳ್ಳಾಯಾರು,ಜೀರ್ಣೋದ್ದಾರ ಸಮಿತಿ ಉಪಾಧ್ಯಕ್ಷ ಮೋಹನ್ ಪೂಜಾರಿ,ನಿರ್ಮಾಪಕ ಸಂಧ್ಯಾ ಗಣೇಶ್ ಪೂಜಾರಿ ಬೆಂಗಳೂರು,
ಸುಬ್ರಹ್ಮಣ್ಯ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ದೀಪಕ್ ಸುವರ್ಣ,ಯುವಕ ಸಂಘದ ಅಧ್ಯಕ್ಷ ರಮೇಶ್ ದೇವಾಡಿಗ,ಯಕ್ಷದೇಗುಲ 10ನೇ ತೋಕೂರು ಅಧ್ಯಕ್ಷ ಮೋಹನ್ ಪೂಜಾರಿ,ಮುಂಬೈಯ ಉದಯವಾಣಿ ಹಿರಿಯ ವರದಿಗಾರ ರಮೇಶ್ ಅಮೀನ್,ಸ್ಕಂದ ಟಿವಿ ಯುಟ್ಯೂಬ್ ಚಾನೆಲ್ ನ ಸಂಸ್ಥಾಪಕ ಗಣೇಶ್ ಪಂಜ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಪ್ರಶಾಂತ್ ಬೇಕಲ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಭಕ್ತಿಗೀತೆಯ ಟ್ರೈಲರ್ ಈಗಾಗಲೇ ಸ್ಕಂದ ಟಿವಿ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿದೆ.