-->


ಕಟೀಲಿನಲ್ಲಿ ಒಂದು ತಿಂಗಳ ನಾಮಸಂಕೀರ್ತನೋಪಾಸನಾ ಸಂಪನ್ನ,ಎರಡು ಸಾವಿರಕ್ಕೂ ಮಂದಿಯಿಂದ ಭಜನೆ

ಕಟೀಲಿನಲ್ಲಿ ಒಂದು ತಿಂಗಳ ನಾಮಸಂಕೀರ್ತನೋಪಾಸನಾ ಸಂಪನ್ನ,ಎರಡು ಸಾವಿರಕ್ಕೂ ಮಂದಿಯಿಂದ ಭಜನೆ


ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಭಾನುವಾರ ನಾಮಸಂಕೀರ್ತನೋಪಾಸನಾ ಸಂಪನ್ನಗೊಂಡಿತು.
ಕ್ಷೇತ್ರದ ಅರ್ಚಕರಾದ ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ ಕಟೀಲು ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಬಳಿಕ ನವರಾತ್ರಿ, ಉತ್ಸವದ ದಿನಗಳು ಅಲ್ಲದೆ ಕಾರ್ತಿಕ ಮಾಸದಲ್ಲೂ ದಿನವಿಡೀ ಭಜನಾ ತಂಡಗಳಿಗೆ ಅವಕಾಶ ನೀಡಲಾಗಿದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಕೇವಲ ದೇವರ ಬಗೆಗಿನ ಭಕ್ತಿಯಿಂದ ಭಜನೆ ಸೇವೆಗೆ ದೂರದ ಊರುಗಳಿಂದಲೂ ಸಾಕಷ್ಟು ತಂಡಗಳು ಬಂದು ಧನ್ಯರಾಗುತ್ತಿದ್ದಾರೆ ಎಂದು ಹೇಳಿದರು.
ಭಜನಾ ಸಂಘಟಕಿ ಶ್ರೀಮತಿ ಜ್ಯೋತಿ ಉಡುಪ ಮಾತನಾಡಿ ಕಟಲಿನಲ್ಲಿ ಸೇವೆ ಸಲ್ಲಿಸಲು ಕರಾವಳಿಯ ಜಿಲ್ಲೆಗಳಿಂದ ಮಾತ್ರವಲ್ಲದೆ, ಮೈಸೂರು, ವೈನಾಡು, ಕಾಸರಗೋಡು,  ಮುಂಬೈಗಳಿಂದಲೂ ತಂಡಗಳು ಬಂದಿವೆ. ೨೧೭ ತಂಡಗಳ ಎರಡು ಸಾವಿರಕ್ಕೂ ಹೆಚ್ಚು ಮಂದಿ ಸೇವೆ ಸಲ್ಲಿಸಿದ್ದು, ಕುಣಿತ ಭಜನಾ ತಂಡಗಳು ಬಂದಿವೆ. ಕಟೀಲು ದೇವಿಯ ಸನ್ನಿಧಿಯಲ್ಲಿ ಭಜನೆ ಮಾಡಿ, ಪ್ರಸಾದ ಸ್ವೀಕರಿಸಿದ ಅನೇಕ ಮಂದಿ ಅನೇಕ ಮಂದಿ ತಮ್ಮ ಸಂತಸ, ಧನ್ಯತೆಯನ್ನು ಹೇಳಿಕೊಂಡಿದ್ದಾರೆ ಎಂದರು.
ನಾಮಸಂಕೀರ್ತನೋಪಾಸನೆಯಲ್ಲಿ ತೊಡಗಿಸಿಕೊಂಡ ಶ್ರೀದೇವೀ ಭಜನಾ ಮಂಡಳಿಯ ಸದಸ್ಯರನ್ನು ಶೇಷವಸ್ತ್ರ ನೀಡಿ ಗೌರವಿಸಲಾಯಿತು.
ಆಡಳಿತ ಮಂಡಳಿಯ ಸನತ್‌ಕುಮಾರ ಶೆಟ್ಟಿ, ಅರ್ಚಕರಾದ ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ ಉಪಸ್ಥಿತರಿದ್ದರು. 
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article