ಸುರತ್ಕಲ್: 13.50 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶಾಲಾ ಕೊಠಡಿಯ ಉದ್ಘಾಟನೆ
Monday, December 2, 2024
ಸುರತ್ಕಲ್ :ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಮಾದರಿ ಶಾಲೆ ಮಾರಿಗುಡಿ, ಸುರತ್ಕಲ್ ಇಲ್ಲಿ ನೂತನವಾಗಿ 13.50 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶಾಲಾ ಕೊಠಡಿಯನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ವೈ ಭರತ್ ಶೆಟ್ಟಿ ಯವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೊರೇಟರ್ ಶೋಭಾ ರಾಜೇಶ್, ಶ್ವೇತಾ ಪೂಜಾರಿ , ಶಾಲಾ ಮುಖ್ಯೋಪಾಧ್ಯಾಯನಿಯಾದ ಜಯಂತಿ,ಶಾಲಾಭಿವೃದ್ದಿ ಸಮಿತಿಯ ಗೌರವ ಸಲಹೆಗಾರರಾದ ಶ್ರೀ ವೆಂಕಟರಮಣ ಮಯ್ಯ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಪ್ರಸನ್ನ,ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ದಿನಕರ್ ಇಡ್ಯಾ ,ಮಂಡಲದ ಉಪಾಧ್ಯಕ್ಷರಾದ ರಾಘವೇಂದ್ರ ಶೆಣೈ ಮಂಡಲದ ಕಾರ್ಯದರ್ಶಿಯಾದ ಪುಷ್ಪರಾಜ್,ವಾರ್ಡ್ ಅಧ್ಯಕ್ಷರಾದ ರಾಜೇಶ್ ಮುಕ್ಕ, ಸುರೇಶ್ ಕರ್ಕೇರ, ಸುಧಾಕರ್, ಕೈಲಾಶ್,ಅಶೋಕ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.