-->


 ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್  ಗೆ  ಅರಸು ಪ್ರಶಸ್ತಿ 2024

ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಗೆ ಅರಸು ಪ್ರಶಸ್ತಿ 2024

ಹಳೆಯಂಗಡಿ:ಸಾಮಾಜಿಕ,ಧಾರ್ಮಿಕ,ಶೈಕ್ಷಣಿಕ , ವೈದ್ಯಕೀಯ,ಆರ್ಥಿಕ ನೆರವಿನ ಮೂಲಕ ಮಹತ್ತರ ಸಾಧನೆ ಮಾಡಿದ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ.)ತೋಕೂರು,ಹಳೆಯಂಗಡಿ ಇವರಿಗೆ ಮುಲ್ಕಿ ಅರಮನೆ ವೆಲ್ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್ ಮತ್ತು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಹಳೆಯಂಗಡಿ ಇವರು ಅರಸು ಪ್ರಶಸ್ತಿ 2024 ನ್ನು ಡಿ.22ರಂದು ಪಡುಪಣಂಬೂರು ಮುಲ್ಕಿ ಸೀಮೆಯ ಅರಮನೆಯ ಅರಸು ಕಂಬಳ ಉತ್ಸವದಲ್ಲಿ ಪ್ರಧಾನಿಸಿ ಗೌರವಿಸಿದರು. 
ಮುಲ್ಕಿ ಸೀಮೆಯ ಅರಸರಾದ  ಎಂ.ದುಗ್ಗಣ್ಣ ಸಾವಂತರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ವಿಶ್ರಾಂತ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಹಾಗೂ ನಿವೃತ್ತ ಲೋಕಾಯುಕ್ತರಾದ  ಸಂತೋಷ್ ಕುಮಾರ್ ಹೆಗ್ಡೆ ಅವರು ಸಂಸ್ಥೆಯ ಅಧ್ಯಕ್ಷ ದೀಪಕ್ ಸುವರ್ಣ ಅವರಿಗೆ ಮೈಸೂರು ಪೇಟಾ ತೊಡಿಸಿ ಶಾಲು, ಫಲ ಪುಷ್ಪ,ಸ್ಮರಣಿಕೆ ಮತ್ತು ಸನ್ಮಾನ ಪತ್ರ ನೀಡಿ ಸನ್ಮಾನಿಸಿದರು.ಈ ಸಂಧರ್ಭ  ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ ಸೂರಿಂಜೆ,ನಿವೃತ್ತ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಎಸ್.ಪಿ ಅರುಣ್ ಕುಮಾರ್,ಗ್ಯಾರೆಂಟಿ ನ್ಯೂಸ್ ಚಾನೆಲ್ ಬೆಂಗಳೂರು ನ  ರಾಧಾ ಹಿರೇಗೌಡ್ರು,ಹಳೆಯಂಗಡಿ ಪ್ರಿಯದರ್ಶಿನಿ ಕೋ- ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್ ವಸಂತ್ ಬೆರ್ನಾಡ್, ಮುಲ್ಕಿ ಅರಮನೆ ವೆಲ್ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಮುಖ್ಯಸ್ಥ  ಗೌತಮ್ ಜೈನ್,ಮುಲ್ಕಿ ಸೀಮೆ ಅರಸು ಕಂಬಳ ಅಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ ,ಪ್ರಧಾನ ಕಾರ್ಯದರ್ಶಿ ಶ್ಯಾಮ್ ಪ್ರಸಾದ್,ಕೋಶಾಧಿಕಾರಿ ನವೀನ ಬಾಂದಕೆರೆ,ಕಂಬಳ ಸಮಿತಿಯ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು,ಶ್ರೀ ಸುಬ್ರಹ್ಮಣ್ಯ ಮಹಾ ಗಣಪತಿ ಸ್ಪೋರ್ಟ್ಸ್ ಕ್ಲಬ್ ನ ಗೌರವಾಧ್ಯಕ್ಷ ಪ್ರಶಾಂತ್ ಕುಮಾರ್ ಬೇಕಲ್, ಕಾರ್ಯಧ್ಯಕ್ಷ ಸಂತೋಷ್ ದೇವಾಡಿಗ,ಉಪಾಧ್ಯಕ್ಷ  ಸಂತೋಷ್ ಕುಮಾರ್,ಮಹಿಳಾ  ಸಮಿತಿಯ ಕಾರ್ಯಧ್ಯಕ್ಶೆ  ಯಶೋಧಾ ದೇವಾಡಿಗ,ಜೊತೆ ಕಾರ್ಯದರ್ಶಿ ಚಂದ್ರ ಸುವರ್ಣ, ಕೋಶಾಧಿಕಾರಿ ಸುನಿಲ್ ಜಿ ದೇವಾಡಿಗ,ನಿಕಟಪೂರ್ವ ಅಧ್ಯಕ್ಷ ಸುರೇಶ್ ಶೆಟ್ಟಿ , ಸದಸ್ಯರಾದ ಧರ್ಮಾನಂದ ಶೆಟ್ಟಿಗಾರ್,ರಮೇಶ್ ಕರ್ಕೇರ,ಚಂದ್ರಶೇಖರ ದೇವಾಡಿಗ,  ಗಣೇಶ್ ದೇವಾಡಿಗ ಪಂಜ, ಆರೋಗ್ಯ ನಿಧಿ ಕಾರ್ಯದರ್ಶಿ ಜಗದೀಶ್ ಕೋಟ್ಯಾನ್,ಪದ್ಮನಾಭ  ಕುಲಾಲ್,ಗೌತಮ್ ಬೆಲ್ಚಡ, ಅರ್ಫಾಜ್, ದಿಗಂತ್, ಶ್ರೇಯಸ್, ಆಯುಷ್, ಲತೀಶ್, ಮಿಥಾನ್ಸ್, ಶ್ರೀಮತಿ ಗೀತಾ ತಾರಾನಾಥ್ ,ಶ್ರೀಮತಿ ಸರಿತಾ ರಮೇಶ್,ಶ್ರೀಮತಿ ಪವಿತ್ರ ಪ್ರಸಾದ್,ಶ್ರೀಮತಿ ಶರ್ಮಿಳ, ಕುಮಾರಿ ಶಿವಾನಿ,ಸಂಸ್ಥೆಯ ಗೌರವ ಮಾರ್ಗದರ್ಶಕ  ನರೇಂದ್ರ ಕೆರೆಕಾಡು,ಯೋಗೀಶ್ ಕೋಟ್ಯಾನ್,ಲೀಲಾದರ್ ಕಡಂಬೋಡಿ,ಪದಾಧಿಕಾರಿಗಳು, ಸಮಿತಿ ಸದಸ್ಯರು ಮತ್ತು ಸದಸ್ಯರು,ಸದಸ್ಯೆಯರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article