ಮುಲ್ಕಿ: ಶ್ರೀ ಉಳ್ಳಾಯ ಹಾಗೂ ಶ್ರೀ ರಕ್ತೇಶ್ವರಿ ದೈವಗಳ ವಿಜೃಂಭಣೆಯ ನೇಮೋತ್ಸವ
Sunday, December 29, 2024
ಮುಲ್ಕಿ: ಕೊಲಕಾಡಿ ಶ್ರೀ ಪಿಲಿಚಾಮುಂಡಿ ಸಪರಿವಾರ ದೈವಸ್ಥಾನದ ವರ್ಷಾವಧಿ ನೇಮೋತ್ಸವದ ಅಂಗವಾಗಿ ಶ್ರೀ ಉಳ್ಳಾಯ ಹಾಗೂ ಶ್ರೀ ರಕ್ತೇಶ್ವರಿ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಗ್ಗೆ ವಿಶೇಷ ಪ್ರಾರ್ಥನೆ, ಭಂಡಾರ ಇಳಿಯುವ ಕಾರ್ಯಕ್ರಮ ನಡೆದು ಶ್ರೀ ಉಳ್ಳಾಯ ಹಾಗೂ ಶ್ರೀ ರಕ್ತೇಶ್ವರಿ ದೈವಗಳ ನೇಮೋತ್ಸವ ನಡೆಯಿತು.
ಈ ಸಂದರ್ಭ ಶ್ರೀ ಪಿಲಿ ಚಾಮುಂಡಿ ಸಪರಿವಾರ ಟ್ರಸ್ಟ್ ಹಾಗೂ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾತ್ರಿ ಅನ್ನಸಂತರ್ಪಣೆ, ಮೈಸಂದಾಯ ನೇಮ,ಶ್ರೀ ಕಾಂತೇರಿ ಜುಮಾದಿ ಗಗ್ಗರಸೇವೆ ಹಾಗೂ ಡಿ. 29 ರಂದು ರಾತ್ರಿ ಪಿಲಿಚಾಮುಂಡಿ ದೈವಗಳ ನೇಮೋತ್ಸವ ನಡೆಯಲಿದೆ.