-->


ಕುಂಡಂತಾಯ, ಮಣಿಮುಂಡ ಶಾಸ್ತ್ರಿಗಳಿಗೆ ಪ್ರಶಸ್ತಿ ಪ್ರದಾನ, ಕಟೀಲು ಕಲಾಪರ್ವ ಸಮಾರೋಪ

ಕುಂಡಂತಾಯ, ಮಣಿಮುಂಡ ಶಾಸ್ತ್ರಿಗಳಿಗೆ ಪ್ರಶಸ್ತಿ ಪ್ರದಾನ, ಕಟೀಲು ಕಲಾಪರ್ವ ಸಮಾರೋಪ

ಕಟೀಲು : ಯಕ್ಷಗಾನ ನಮ್ಮಲ್ಲಿ ಸತ್ ಚಿಂತನೆಯನ್ನು ಬೆಳೆಸುವುದರಿಂದ ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕು. ಕಟೀಲು ಮಕ್ಕಳ ಮೇಳದ ಕಾರ್ಯ  ಅಭಿನಂದನೀಯ ಎಂದು ಕೊಂಡೇವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಮಕ್ಕಳ ಮೇಳದ ವಾರ್ಷಿಕ ಕಲಾಪರ್ವದಲ್ಲಿ ಮಾತನಾಡಿದರು.
ಯಕ್ಷಗಾನ ವಿದ್ವಾಂಸ ಕೆ.ಎಲ್.ಕುಂಡಂತಾಯ ಇವರಿಗೆ ಕಟೀಲು ಸದಾನಂದ ಆಸ್ರಣ್ಣ ಪ್ರಶಸ್ತಿ.  ಖ್ಯಾತ ಹಿಮ್ಮೇಳ ವಾದಕ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ ಇವರಿಗೆ ಕಟೀಲು ಕೃಷ್ಣ ಆಸ್ರಣ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
ಯಕ್ಷಗಾನ ಅಕಾಡಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರವನ್ನು ಯಕ್ಷಗಾನದ ಮೂಲಕ ಕಲಿಸುವ ಅವಕಾಶ ಇದೆ. ಇಲ್ಲದಿದ್ದರೆ ಹಿರಿಯರನ್ನು ಗೌರವಿಸುವ ಮನಸ್ಥಿತಿಯಿಂದ ದೂರವಾಗುವ ಮಕ್ಕಳನ್ನು ಕಾಣುವ ದಿನಗಳು ಬರಬಹುದು ಎಂದರು. 
ಕಟೀಲು ಅರ್ಚಕ ವೆಂಕಟರಮಣ ಆಸ್ರಣ್ಣ, ಅನಂತ ಆಸ್ರಣ್ಣ. ಕಮಲಾದೇವೀಪ್ರಸಾದ ಆಸ್ರಣ್ಣ, ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜ ಸಂಘಟನೆಯ ಸುಬ್ರಹ್ಮಣ್ಯ ಪ್ರಸಾದ್. 
ಖ್ಯಾತ ವಕೀಲ ಪಿ.ಎಸ್. ರಾಜಗೋಪಾಲ್. ಉದ್ಯಮಿ ಪ್ರದ್ಯುಮ್ನ ರಾವ್, ಲೋಕಯ್ಯ ಸಾಲ್ಯಾನ್, ಗುರುರಾಜ ಮಲ್ಲಿಗೆಯಂಗಡಿ, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಮಾಜಿ ಸಚಿವ ಅಭಯಚಂದ್ರ. ಸಿಎ ಚಂದ್ರಶೇಖರ ಶೆಟ್ಟಿ, ರಾಧಾಕೃಷ್ಣ ನಾಯಕ್, ನಿತಿನ್ ಹೆಗ್ಡೆ ಎಕ್ಕಾರು. ಸೀತಾರಾಮ ಶೆಟ್ಟಿ, ಕೊಡೆತ್ತೂರು ದಿವಾಕರ ಶೆಟ್ಟಿ, ಕುಕ್ಕುಂದೂರು ಚಂದ್ರಶೇಖರ ಶೆಟ್ಟಿ. ಶ್ರೀಧರ ಶೆಟ್ಟಿ ಪುಳಿಂಚ, ಅಲಂಗಾರು ದೇಗುಲದ ಸುಬ್ರಹ್ಮಣ್ಯ ಭಟ್, ಕಟೀಲು ಕಾಲೇಜಿನ ಕುಸುಮಾವತಿ, ಮುಖ್ಯ ಶಿಕ್ಷಕಿ ಸರೋಜಿನಿ ಮತ್ತಿತರರಿದ್ದರು. 
ದುರ್ಗಾ ಮಕ್ಕಳ ಮೇಳದ ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ವಾಸುದೇವ ಶೆಣೈ ನಿರೂಪಿಸಿದರು. ಪಶುಪತಿ ಶಾಸ್ತ್ರಿ ವಂದಿಸಿದರು.

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article