-->


ಸುರತ್ಕಲ್: ಯಕ್ಷಗಾನದ ಸಂಭ್ರಮಾಚರಣೆ: "ಯಕ್ಷದ್ಯುತಿ" ಆಮಂತ್ರಣ ಬಿಡುಗಡೆ

ಸುರತ್ಕಲ್: ಯಕ್ಷಗಾನದ ಸಂಭ್ರಮಾಚರಣೆ: "ಯಕ್ಷದ್ಯುತಿ" ಆಮಂತ್ರಣ ಬಿಡುಗಡೆ

ಸುರತ್ಕಲ್: ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತೆ  ಪೂರ್ಣಿಮಾ ಯತೀಶ್ ರೈ ಅವರ 35 ವರುಷಗಳ ಯಕ್ಷಯಾನದ ಸಂಭ್ರಮಾಚರಣೆ "ಯಕ್ಷದ್ಯುತಿ" ಯ ಆಮಂತ್ರಣ ಪತ್ರಿಕೆಯನ್ನು‌  ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸುರತ್ಕಲ್ ನಲ್ಲಿ  ಶಕುಂತಲಾ ರಮಾನಂದ ಭಟ್ ಬಿಡುಗಡೆಗೊಳಿಸಿದರು. 
ಈ ಸಂದರ್ಭದಲ್ಲಿ ಕಾರಿಂಜೇಶ್ವರ ದೇವಸ್ಥಾನ, ಕಾರಿಂಜದ ಅರ್ಚಕರಾದ ಮಿಥುನ್ ರಾಜ್ ನಾವಡ, ಯಕ್ಷಪೂರ್ಣಿಮಾ ಬಿರುದಾಂಕಿತೆ ಪೂರ್ಣಿಮಾ ಯತೀಶ್ ರೈ , ಯಕ್ಷದ್ಯುತಿ ಅಭಿನಂದನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಭಟ್, ಉಪಾಧ್ಯಕ್ಷರುಗಳಾದ ಲೀಲಾಧರ್ ಶೆಟ್ಟಿ ಕಟ್ಲ, ಗಂಗಾಧರ ಪೂಜಾರಿ ಚೇಳಾರು, ಸಂಚಾಲಕರಾದ ಸಾಯಿಸುಮಾ ನಾವಡ, ಕಾರ್ಯದರ್ಶಿ ಅನಂತಮೂರ್ತಿ,  ಕೋಶಾಧಿಕಾರಿ ಪೂರ್ಣಿಮಾ ಶಾಸ್ತ್ರಿ,  ಜೊತೆ ಕಾರ್ಯದರ್ಶಿಗಳಾದ ಸಹನಾ ರಾಜೇಶ್ ರೈ , ರೇವತಿ ನವೀನ್ ಮೊದಲಾದವರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article