ಮೂಲ್ಕಿ ಸೀಮೆಯ ಅರಸು ಕಂಬಳ ಉದ್ಘಾಟನೆ
Monday, December 23, 2024
ಹಳೆಯಂಗಡಿ:ಮೂಲ್ಕಿ ಸೀಮೆಯ ಅರಸು ಕಂಬಳವನ್ನು ಭಾನುವಾರದಂದು ನಿವೃತ್ತ ಲೋಕಾಯುಕ್ತ ಹಾಗೂ ವಿಶ್ರಾಂತ ಸುಪ್ರಿಂ ಕೋರ್ಟ್ ನ್ಯಾಯಾದೀಶರಾದ ಸಂತೋಷ್ ಹೆಗ್ಡೆ ಯವರು ಉದ್ಘಾಟಿಸಿದರು.
ಅಂದು ಬೆಳಿಗ್ಗೆ ಅರಮನೆಯ ನಾಗಬನದಲ್ಲಿ ವೆಂಕಟರಾಜ ಉಡುಪ ಅತ್ತೂರು ಬೈಲು ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ, ಅರಮನೆಯ ಚಂದ್ರನಾಥ ಸ್ವಾಮಿ, ಮತ್ತು ಪದ್ಮಾವತಿ ಅಮ್ಮನವರ ಬಸದಿಯಲ್ಲಿ ಪೂಜೆ ನಡೆದು ನಂತರ ಅರಮನೆಯ ಜಟ್ಟಿ ಎತ್ತುಗಳು ಮತ್ತು ಎರುಬಂಟ ಸಹಿತ ಕಂಬಳ ಕರೆಗೆ ಬಂದು ಶಿಮಂತೂರು ಆದಿಜನಾರ್ದನ ದೇವಸ್ಥಾನ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ಮೈಸೂರು ಚಾಮುಂಡೇಶ್ವರೀ ದೇವಸ್ಥಾನದ ಪ್ರಸಾದವನ್ನು ಕಂಬಳದ ಕರೆಗೆ ಹಾಕಿ ಕಂಬಳಕ್ಕೆ ಚಾಲನೆ ನೀಡಲಾಯಿತು. ಅರಮನೆಯ ಧರ್ಮಚಾವಡಿಯಲ್ಲಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರ ನೇತೃತ್ವದಲ್ಲಿ ವಿವಿಧ ಸಂಪ್ರದಾಯಗಳು ನಡೆಯಿತು.
ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಲೋಕಾಯುಕ್ತ ಹಾಗೂ ವಿಶ್ರಾಂತ ಸುಪ್ರಿಂ ಕೋರ್ಟ್ ನ್ಯಾಯಾದೀಶರಾದ ಸಂತೋಷ್ ಹೆಗ್ಡೆ ಯವರು ಮಾತನಾಡಿ ತುಳುನಾಡಿನ ಸಂಪ್ರದಾಯ,ಧಾರ್ಮಿಕ ನಂಬಿಕೆಯಿಂದ ಕೂಡಿರುವ ಮನೋರಂಜನ ಕ್ರೀಡೆ ಕಂಬಳವಾಗಿದೆ. ಅರಸು ಪರಂಪರೆಯ ಈ ಕಂಬಳವು ನೂರಾರು ವರ್ಷಗಳಿಂದ ಕಂಬಳ ನಡೆದುಕೊಂಡು ಬಂದಿರುವುದು ಸಂತೋಷದ ವಿಚಾರ ಎಂದರು.
ವೇದಿಕೆಯಲ್ಲಿ ಪಂಜ ಬಾಸ್ಕರ ಭಟ್, ವೈ ಗಣೇಶ್ ಭಟ್ ಏಳಿಂಜೆ, ಶಾಸಕ ಉಮಾನಾಥ ಕೋಟ್ಯಾನ್, ಬಪ್ಪನಾಡು ದೇವಳದ ಆಡಳಿತ ಮೊಕ್ತೇಸರ ಮನೋಹರ್ ಶೆಟ್ಟಿ, ಕಂಬಳ ಸಮಿತಿ ಅಧ್ಯಕ್ಷ ಕಿರಣ್ ಶೆಟ್ಟಿ ಕೊಲ್ನಾಡುಗುತ್ತು, ಹಳೆಯಂಗಡಿ ಪ್ರಿಯದರ್ಶಿನಿ ಕೊ ಅಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ ಬೆರ್ನಾಡ್, ಗೌತಮ್ ಜೈನ್ ಮುಲ್ಕಿ ಅರಮನೆ ಹಾಗೂ ಮೊದಲಾದವರು ಉಪಸ್ಥಿತರಿದ್ದರು.