-->


ಮೂಲ್ಕಿ :ಅರಸು ಪ್ರಶಸ್ತಿ - 2024 ಪ್ರದಾನ

ಮೂಲ್ಕಿ :ಅರಸು ಪ್ರಶಸ್ತಿ - 2024 ಪ್ರದಾನ

ಹಳೆಯಂಗಡಿ:ಮುಲ್ಕಿ ಅರಮನೆ ವೆಲ್ವೇರ್ ಟ್ರಸ್ಟ್ ಹಾಗೂ ಹಳೆಯಂಗಡಿಯ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಸಹಭಾಗಿತ್ವದಲ್ಲಿ ಸೀಮೆ ವ್ಯಾಪ್ತಿಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 14 ಮಂದಿ ಸಾಧಕರಿಗೆ "ಅರಸು ಪ್ರಶಸ್ತಿ - 2024 ” ನೀಡಿ ಗೌರವಿಸುವ ಕಾರ್ಯಕ್ರಮ ಪಡುಪಣಂಬೂರು ಮುಲ್ಕಿ ಅರಮನೆಯ ಧರ್ಮಚಾವಡಿಯಲ್ಲಿ ಭಾನುವಾರದಂದು  ನಡೆಯಿತು.

 ಮುಲ್ಕಿ ಸೀಮೆಯ  ಅರಸರಾದ ಎಂ. ದುಗ್ಗಣ್ಣ ಸಾವಂತರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ನಿವೃತ್ತ ಲೋಕಾಯುಕ್ತ ಹಾಗೂ ವಿಶ್ರಾಂತ ಸುಪ್ರೀಂ ಕೋರ್ಟ್ ನ್ಯಾಯಾದೀಶರಾದ ಸಂತೋಷ್ ಕುಮಾರ್ ಹೆಗ್ಡೆಯವರು ಪ್ರಶಸ್ತಿಯನ್ನು  ಪ್ರಧಾನ ಮಾಡಿದರು.

ಈ ಸಂದರ್ಭ ಮುಖ್ಯ  ದ ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ ,ನಿವೃತ್ತ ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ಅರುಣ್ ಕುಮಾರ್ ಎಸ್ ಪಿ,ಗ್ಯಾರಂಟಿ ನ್ಯೂಸ್ ಚಾನೆಲ್  ನ ರಾಧ ಹಿರೇಗೌಡ್ರು ,ಬಿಗ್ ಬಾಸ್ ಖ್ಯಾತಿಯ ಪ್ರಥಮ್, ಅರಮನೆ ವೆಲ್ವೇ‌ರ್ ಟ್ರಸ್ಟಿ ಗೌತಮ್ ಜೈನ್, ಪ್ರಿಯದರ್ಶಿನಿ ಕೋ ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಎಚ್ ವಸಂತ್ ಬೆರ್ನಾರ್ಡ್,ಮುಖ್ಯಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿ (ಸಾಧನ ಪ್ರಶಸ್ತಿ), ದಿ। ಎಚ್ ನಾರಾಯಣ ಸನಿಲ್ (ಮರಣೋತ್ತರ ಪ್ರಶಸ್ತಿ), ದಿ। ಬಾಬು ಎನ್ ಶೆಟ್ಟಿ (ಮರಣೋತ್ತರ ಪ್ರಶಸ್ತಿ), ಶ್ರೀಮತಿ ಮೀರಾಬಾಯಿ ಕೆ (ಶೈಕ್ಷಣಿಕ ಕ್ಷೇತ್ರ), ಶ್ರೀಮತಿ ಎಚ್ ಶಕುಂತಳಾ ಭಟ್‌ (ಸಾಹಿತ್ಯ ಕ್ಷೇತ್ರ), ವಾಲ್ಟರ್ ಡಿಸೋಜಾ (ಕೃಷಿ ಪರಿಸರ ಕ್ಷೇತ್ರ), ಡಾ॥ ಹಸನ್ ಮುಬಾರಕ್ (ವೈದ್ಯಕೀಯ ಕ್ಷೇತ್ರ), ಸೀತಾರಾಮ್ ಕುಮಾರ್ ಕಟೀಲು (ಯಕ್ಷಗಾನ ಕ್ಷೇತ್ರ), ಶಿವ ಸಂಜೀವಿನಿ ಸುರಗಿರಿ (ಸಂಘ ಸಂಸ್ಥೆಗಳ ವಿಭಾಗ), ಪರಮಾನಂದ ಸಾಲಿಯಾನ್ ಸಸಿಹಿತ್ಲು (ಸಾಹಿತ್ಯ ಕ್ಷೇತ್ರ), ಮಾಧವ ಶೆಟ್ಟಿಗಾ‌ರ್(ಸಾಮಾಜಿಕ ಕ್ಷೇತ್ರ), ಶ್ರೀ ಚಂದ್ರಕುಮಾ‌ರ್ (ಸಾಮಾಜಿಕ ಕ್ಷೇತ್ರ), ಸುಬ್ರಮಣ್ಯ ಮಹಾಗಣಪತಿ ಸ್ಪೋರ್ಟ್ ಕ್ಲಬ್‌ ತೋಕೂರು (ಸಂಘ ಸಂಸ್ಥೆಗಳ ವಿಭಾಗ), ವಿನಾಯಕ ಯಕ್ಷಗಾನ ಫೌಂಡೇಶನ್ ಕೆರೆಕಾಡು (ಯಕ್ಷಗಾನ) ರವರಿಗೆ “ಅರಸು ಪ್ರಶಸ್ತಿ” ನೀಡಿ ಗೌರವಿಸಲಾಯಿತು.

ವಸಂತ್ ಬೆರ್ನಾಡ್ ಸ್ವಾಗತಿಸಿದರು.

ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಧನ್ಯವಾದ ಅರ್ಪಿಸಿದರು ಪ್ರಕಾಶ್ ಕಿನ್ನಿಗೋಳಿ ನಿರೂಪಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article