ನೂತನ ಬಿಂಬದ ಮೆರವಣಿಗೆ ಮತ್ತು ಹೊರೆಕಾಣಿಕೆ ಮೆರವಣಿಗೆ
Sunday, December 22, 2024
ಕಟೀಲು: ಬ್ರಹ್ಮಶ್ರೀ ನಾರಾಯಣಗುರುಗಳ ನೂತನ ಮಂದಿರ ಲೋಕಾರ್ಪಣೆ ಮತ್ತು ಬಿಂಬ ಪ್ರತಿಷ್ಟೆ ಹಾಗೂ ಕುಂಭಾಭಿಷೇ ಕದ ಪ್ರಯುಕ್ತ, ನೂತನ ಬಿಂಬದ ಮೆರವಣಿಗೆ ಮತ್ತು ಹೊರೆಕಾಣಿಕೆ ಮೆರವಣಿಗೆ ಕಟೀಲಿನಿಂದ ಅಜಾರು ನೂತನ ಗುರು ಮಂದಿರದವರೆಗೆ ನಡೆಯಿತು. ಈ ಸಂದರ್ಭ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಕಟೀಲು ಬಿಲ್ಲವ ಸಂಘದ ನೀಲಯ್ಯ ಕೋಟ್ಯಾನ್ ಕಟೀಲು, ತಿಮ್ಮಪ್ಪ ಕೋಟ್ಯಾನ್ ಕಟೀಲು, ಲೋಕಯ್ಯ ಸಾಲ್ಯಾನ್ ಕೊಂಡೇಲ,
ನವೀನ್ ಕುಮಾರ್ ಕಟೀಲು, ಮಂಜುನಾಥ ಪೂಜಾರಿ ಮಲ್ಲಿಗೆಯಂಗಡಿ, ಆರುಣ್ ಕುಮಾರ್, ಶರಣ್ ಕುಮಾರ್ ಕಟೀಲು, ಕೇಶವ,
ಈಶ್ವರ ಕಟೀಲು, ಬಾಲಕೃಷ್ಣ ಪೂಜಾರಿ, ಉದಯ್ ಕುಮಾರ್, ಶೇಖರ ಅಮೀನ್ ಮತ್ತಿತರರು ಉಪಸ್ಥಿತರಿದ್ದರು. ಕಟೀಲಿನಿಂದ ನೂರಾರು ಜನ ಭಕ್ತರು ಮೆರವಣಿಗೆಯಲ್ಲಿ ಸಾಗಿದರು.