ಆಳ್ವಾಸ್‌ಗೆ ಸಸಿಹಿತ್ಲು ಎ" ಇಲೆವೆನ್ ಸ್ಪೋರ್ಟ್ಸ್ ಕ್ಲಬ್ ಪ್ರಶಸ್ತಿ
Tuesday, December 31, 2024
ಮೂಲ್ಕಿ:ಕ್ರೀಡಾ ಸಂಘಟನೆಯೊಂದಿಗೆ ಅಶಕ್ತರಿಗೆ ನೆರವಾಗುತ್ತಿರುವುದು ಶ್ಲಾಘನೀಯ, ಯುವ ಸಮುದಾಯವು ಕ್ರೀಡೆಯಿಂದ ಸಮಾಜ ಸೇವೆಯತ್ತ ಮುಂದುವರಿಯಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ ಹೇಳಿದರು.
ಅವರು ಸಸಿಹಿತ್ಲುವಿನ ಶ್ರೀ ಭಗವತೀ ದೇವಸ್ಥಾನದ ಬಳಿಯಲ್ಲಿ ಸಸಿಹಿತ್ಲು ಎ" ಇಲೆವೆನ್ ಸ್ಪೋರ್ಟ್ಸ್ ಕ್ಲಬ್‌ನ ಸಂಯೋಜನೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾಜ್ಯ ಮಟ್ಟದ ಪ್ರೊ ಕಬಡ್ಡಿ-2024 ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಸಿಹಿತ್ಲು ಗ್ರಾಮದ ಅರ್ಹ ಅಶಕ್ತರಿಗೆ ಹಾಗೂ ಪ್ರತಿಭಾಂತರಿಗೆ ವಿದ್ಯಾರ್ಥಿವೇತನ ನೀಡಲಾಯಿತು. '''ಪಂದ್ಯಾಕೂಟದಲ್ಲಿ ಒಟ್ಟು 18 ತಂಡಗಳು ಭಾಗವಹಿಸಿದ್ದವು.
ಫೈನಲ್ಸ್ ಪಂದ್ಯದಲ್ಲಿ ಆಳ್ವಾಸ್ ಕಾಲೇಜು (ಪ್ರ) ಎಸ್ ಡಿಎಂ ಕಾಲೇಜು ಉಜಿರೆ (ದ್ವಿ) ಶ್ರೀ ಉಮಾ ಮಹೇಶ್ವರಿ ಕಾಪಿಕಾಡ್ (ತೃ) ಫ್ರೆಂಡ್ಸ್ ಪಡು ಪಣಂಬೂರು(ಚ) ಬಹುಮಾನ ಪಡೆಯಿತು.
ಶ್ರೀ ಭಗವತಿ ದೇವಸ್ಥಾನದ ಪ್ರಧಾನ ಪ್ರಧಾನ ಅರ್ಚಕ ಶ್ರೀನಿವಾಸ ಪೂಜಾರಿ, ಭಾರತ್ ಬ್ಯಾಂಕ್‌ನ ಅಧ್ಯಕ್ಷ ಸೂರ್ಯಕಾಂತ್ ಸುವರ್ಣ, ಮಂಗಳೂರು ಮಹಾನಗರ ಪಾಲಿಕೆಯ ಪ್ರತಿಪಕ್ಷ ನಾಯಕ ಅನಿಲ್ ಪೂಜಾರಿ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಎ ಇಲೆವೆನ್ ಅಧ್ಯಕ್ಷ ಸುಭಾಷ್ ಕೋಟ್ಯಾನ್, ತಾಲ್ಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ದಿನಕರ ಶೆಟ್ಟಿ, ಮೂಲ್ಕಿ ಪಟ್ಟಣ ಪಂಚಾಯಿತಿ ಸದಸ್ಯ ಯೋಗೀಶ್ ಕೋಟ್ಯಾನ್, ಮೂಲ್ಕಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ್, ದಿನಕರ್ ಬಂಗೇರ, ಹರೀಶ್ ಪೂಜಾರಿ, ಪ್ರಭಾಕರ ಕರ್ಕೇರ, ಪ್ರಕಾಶ್,ಅನಿಲ್ ಸಾಲ್ಯಾನ್,ಅನಿಲ್ ಪೂಜಾರಿ, ಚಂದ್ರಕುಮಾರ್, ಹರೀಶ್ ಪೂಜಾರಿ ಪ್ರಶಸ್ತಿ ನೀಡಿ ಗೌರವಿಸಿದರು. ಪದಾಧಿಕಾರಿಗಳಾದ ಭರತ್, ರಾಕೇಶ್ ವಿವಿಧ ಜವಬ್ದಾರಿ ನಿರ್ವಹಿಸಿದರು.
ಬಾಕ್ಸ್ನಲ್ಲಿ
ಜನಾಕರ್ಷಣೆ ಪಡೆದ ಸಾಂಸ್ಕೃತಿಕ ಕಾರ್ಯಕ್ರಮ :
ರಾಜ್ಯ ಮಟ್ಟದ ಕಬ್ಡ್ಇ ಪಂದ್ಯಾಟದ ಪೂರ್ವಭಾವಿಯಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕರಾವಳಿ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮವನ್ನು ನೀಡಿದ ಕಲಾವಿದರು ಜನಮೆಚ್ಚುಗೆ ಪಡೆದರು.