ಮೂವರು ಮಕ್ಕಳನ್ನು ಕೊಂದ ತಂದೆಗೆ ಮರಣದಂಡನೆ ಶಿಕ್ಷೆ
Tuesday, December 31, 2024
ಮೂಲ್ಕಿ : ತಾಳಿಪಾಡಿ ಶೆಟ್ಟಿಕಾಡು ಪದ್ಮನೂರಿನಲ್ಲಿ ತನ್ನ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಲೆ ಮಾಡಿ ಪತ್ನಿಯನ್ನು ಬಾವಿಗೆ ನೂಕಿ ಕೊಲೆಗೆ ಯತ್ನಿಸಿದ ಆರೋಪಿ ಹಿತೇಶ್ ಶೆಟ್ಟಿಗಾರ್ (43) ಗೆ ಅಪರಾಧ ಕ್ರಮಾಂಕ 42/2023 ಕಲಂ 302,,307 ಐಪಿಸಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.31 ರಂದು ಮಾನ್ಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿದೆ.
23/06/2022 ರಂದು ದೂರುದಾರರಾದ ಲಕ್ಷ್ಮಿ ಅವರು ಸಂಜೆ ಕೆಲಸ ಮುಗಿಸಿ ತನ್ನ ಮನೆಗೆ ಬಂದಾಗ ಮನೆಯಲ್ಲಿ ಗಂಡ ಹಿತೇಶ್ ಶೆಟ್ಟಿಗಾರ್, ಎಂದಿನಂತೆ ಸಂಜೆ 04:15 ಗಂಟೆಗೆ ಬರಬೇಕಾಗಿದ್ದ ಮಕ್ಕಳು ಕಾಣದೇ ಇದ್ದಾಗ ತನ್ನ ಮಕ್ಕಳು ಎಲ್ಲಿ ಎಂದು ಕೇಳಿದಾಗ ಎಲ್ಲೋ ಅಡಗಿರಬಹುದೆಂದು ತಿಳಿಸಿದ್ದು ನಂತರ ಪಕ್ಕದ ಮನೆಯ ಬಾವಿಯ ಬಳಿ ಹೋಗಿ ಹುಡುಕಾಡಿದಾಗ ಬಾವಿಯೊಳಗಿಂದ ಕೊಸಾರಾಡುತಿದ್ದ ಮಕ್ಕಳಾದ ರಶ್ಮಿಕಾ(14) ಉದಯ್(11) ದಕ್ಷಿತ್ (04) ಎಂಬ 03 ಜನ ಮಕ್ಕಳನ್ನು ಬಾವಿಗೆ ಹಾಕಿ ಕೊಲೆ ಮಾಡಿದ್ದು ಸ್ಥಳದಲ್ಲಿ ಕೂಗಾಡುತಿದ್ದ ಹೆಂಡತಿ ಲಕ್ಷ್ಮೀ ಯನ್ನು ಬಾವಿಗೆ ಹಾಕಿ ಕೊಲೆ ಯತ್ನಕ್ಕೆ ಪ್ರಯತ್ನಿಸಿದ್ದು, ಘಟನೆಸಂಭವಿಸಿದಾಗ ಸ್ಥಳೀಯರು ಸೇರಿ ಲಕ್ಷ್ಮೀಯನ್ನು ಬದುಕಿಸಿದ್ದರು.
3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳೂರು ನ್ಯಾಯಾಧೀಶೆ ಸಂಧ್ಯಾ ಅವರು ಈ ಪ್ರಕರಣದ ಸಂಪೂರ್ಣ ವಿಚಾರಣೆಯನ್ನು ಮಾಡಿ ಆರೋಪಿಗೆ ಕಲಂ 302 ಪ್ರಕರಣಕ್ಕೆ ಮರಣ ದಂಡನೆ ಶಿಕ್ಷೆ ವಿಧಿಸಿರುತ್ತಾರೆ.
ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ದೋಷರೋಪಣಾ ಪಟ್ಟಿಯನ್ನು ಅಂದಿನ ಮೂಲ್ಕಿ ಠಾಣಾ ಪಿ ಐ ಕುಸುಮಾಧರ್ ರವರು ಸಲ್ಲಿಸಿದ್ದು. ತನಿಖಾ ಸಹಾಯಕರಾಗಿ ASI ಸಂಜೀವ್ ರವರು ತನಿಖೆಗೆ ಸಹಕರಿಸಿರುತ್ತಾರೆ.ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಮೋಹನ್ ಕುಮಾರ್ ವಾದ ಮಂಡಿಸಿರುತ್ತಾರೆ.