-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ವಿಶೇಷ ಸೀಮಂತ ಕಾರ್ಯಕ್ರಮಕ್ಕೆ  ಸಾಕ್ಷಿಯಾದ  ಕಿನ್ನಿಗೋಳಿ ತಾಳಿಪಾಡಿ ಗುತ್ತುವಿನ  ಪೂಂಜಾ ಕುಟುಂಬ

ವಿಶೇಷ ಸೀಮಂತ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಕಿನ್ನಿಗೋಳಿ ತಾಳಿಪಾಡಿ ಗುತ್ತುವಿನ ಪೂಂಜಾ ಕುಟುಂಬ

ಕಿನ್ನಿಗೋಳಿ:ಕಿನ್ನಿಗೋಳಿ  ರೇಷ್ಮಾ ಹಾಲ್ ನಲ್ಲಿ    ನಡೆದ ಕಿನ್ನಿಗೋಳಿಯ ತಾಳಿಪಾಡಿ ಗುತ್ತಿನ  ಮನೆಯ ಸೊಸೆ  ನಿಧಿ ಮೋಹನ್ ಪೂಂಜ ಇವರ ಸೀಮಂತ ಕಾರ್ಯಕ್ರಮ  ವಿಶೇಷ ರೀತಿಯಲ್ಲಿ ನಡೆಯಿತು. ತಾಳಿಪಾಡಿ ಗುತ್ತುವಿನ  ಪೂಂಜ ಕುಟುಂಬ  ಮತ್ತು ಜೈ ತುಳುನಾಡ್ ( ರಿ) ಸಹಯೋಗದಲ್ಲಿ ಮರೆಯಾಗುತ್ತಿರುವ  ತುಳುಬಾಷೆಯನ್ನು ಉಳಿಸಬೇಕು ಎಂಬ ನಿಟ್ಟಿನಲ್ಲಿ  ತುಳು ಕವಿಗೋಷ್ಠಿ ನಡೆಯಿತು .
      ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಮಣಿಪಾಲ ಉಡುಪಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹ  ಪ್ರಾಧ್ಯಾಪಕಿ  ಅರ್ಪಿತಾ ಪ್ರಶಾಂತ್ ಶೆಟ್ಟಿ ಕಟಪಾಡಿ  ಅವರು ವಹಿಸಿ ಮಾತನಾಡಿ ಮರೆಯಾಗಿತ್ತಿರುವ  ಮಾತೃ ಬಾಷೆ ಉಳಿಸುವುವಂತಹ  ಕಾರ್ಯಕ್ರಮ ಗಳು ಅಲ್ಲಲ್ಲಿ ನಡೆದಲ್ಲಿ ನಮ್ಮ ಮಾತೃ ಬಾಷೆಗೆ  ಮಾನ್ಯತೆ ಸಿಗುವುದರಲ್ಲಿ  ಬೇರೆ ಮಾತಿಲ್ಲ. ಕಾರ್ಯಕ್ರಮದಲ್ಲಿ ನಡೆದ ಕವಿಗೋಷ್ಠಿ ವಿಶೇಷ ವಾಗಿದೆ ಎಂದರು. 
ವೇದಿಕೆಯಲ್ಲಿ  ಜೈ ತುಳುನಾಡ್ (ರಿ) ಕೇಂದ್ರ ಸಮಿತಿ ಯ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಬಂಟ್ವಾಳ, ಜೈ ತುಲುನಾಡ್ (ರಿ) ಸ್ಥಾಪಕ ಸಮಿತಿ ಸದಸ್ಯ ಕಿರಣ್ ತುಲುವೆ ಉಪಸ್ಥಿತರಿದ್ದರು . ಕವಿಗೋಷ್ಠಿಯಲ್ಲಿ ಕವಿಗಳಾದ ನವೀನ ಕುಮಾರ್ ಪೆರಾರ , ವೈಷ್ಣವಿ ಸುಧೀಂದ್ರ ರಾವ್, ಶ್ವೇತಾ ಡಿ ಬಡಗಬೆಳ್ಳೂರು, ಪ್ರೇಮಾ ಆರ್ ಶೆಟ್ಟಿ ಮುಲ್ಕಿ ತನ್ನ ಕವಿತೆಗಳನ್ನು ವಾಚಿಸಿದರು .
ಜೈ ತುಳುನಾಡ್ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಉದಯ ಪೂಂಜ ತಾರಿಪಾಡಿ ಗುತ್ತು ಸ್ವಾಗತಿಸಿದರು . ಚಿರಶ್ರೀ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ