ಕಿನ್ನಿಗೋಳಿ ರಾಜ್ಯಮಟ್ಟದ ಮಕ್ಕಳ ಹಬ್ಬ
Monday, December 30, 2024
ಕಿನ್ನಿಗೋಳಿ : ಮಕ್ಕಳಲ್ಲಿ ವಿದ್ಯೆ, ವಿನಯ, ಸನ್ನಡತೆ ಇದ್ದು ಸಾಧನೆ ಮಾಡಬೇಕು ಇದರಿಂದ ಯಶಸ್ಸು ಸಾಧ್ಯವಿದೆ ಎಂದು ಸುಳ್ಯ ಎನ್‌ಎಂಸಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಮಕ್ಕಳ ಹಬ್ಬ ಸಮ್ಮೇಳನದ ಅಧ್ಯಕ್ಷೆ ಶ್ರೇಯಾ ಎಂ.ಜೆ. ಸುಳ್ಯ ಹೇಳಿದರು.
ಅವರು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡದ ಯುಗಪುರುಷ ಕಿನ್ನಿಗೋಳಿ ನೇತೃತ್ವದಲ್ಲಿ ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ಸಹಭಾಗಿತ್ವದಲ್ಲಿ ರಾಜ್ಯಮಟ್ಟದ ಮಕ್ಕಳ ಹಬ್ಬದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳಲ್ಲಿ ಸೃಜನಶೀಲದ ಭೌತಿಕ ಮಟ್ಟ ಬೆಳವಣಿಗೆಗೆ ಇಂತಹ ವೇದಿಕೆ ನೀಡಿ ಪ್ರೋತ್ಸಾಹಿಸಿದರೆ ಮಾತ್ರ ಮಕ್ಕಳು ಬೆಳೆಯಲು ಸಾಧ್ಯವಿದೆ ಎಂದರು. ಶಿಮಂತೂರು ಶ್ರೀ ಶಾರದಾ ಸೆಂಟ್ರಲ್ ಶಾಲೆಯ ವಿದ್ಯಾರ್ಥಿ ಕೇಶವ ಭಟ್ ಮಕ್ಕಳ ಹಬ್ಬವನ್ನು ಉದ್ಘಾಟಿಸಿದರು. ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಉಳೆಪಾಡಿ ಶ್ರೀ ದುರ್ಗಾಪರಮೇಶ್ವರಿ ಮಹಮ್ಮಾಯೀ ದೇವಸ್ಥಾನದ ಧರ್ಮದರ್ಶಿ ಮೋಹನದಾಸ ಸುರತ್ಕಲ್, ತನು ಇಲೆಕ್ಟ್ರಿಕಲ್ಸ್‌ನ ಅಜಿತ್ ಕೆರೆಕಾಡು, ಮೂಡುಬಿದಿರೆ ಜಾನಪದ ಅಕಾಡೆಮಿಯ ತಾಲೂಕು ಘಟಕದ ಅಧ್ಯಕ್ಷೆ ಪದ್ಮಶ್ರೀ ಭಟ್, ಅರುಣ ಅಜೆಕಾರು, ಮೂಲ್ಕಿ ಹೋಬಳಿ ಕಸಾಪ ಅಧ್ಯಕ್ಷ ಜೊಸ್ಸಿ ಪಿಂಟೋ, ಸಾಯಿನಾಥ ಶೆಟ್ಟಿ ಮುಂಡ್ಕೂರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅರ್ಚಿತ್ ಕಶ್ಯಪ್ ಮೂಡುಬಿದ್ರೆ ಇವರ ಲಿಟ್ಲ್ ಬರ್ಡ್ ಚಾಂಪಿಂಗ್ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ ಸ್ವಾಗತಿಸಿದರು. ಉಪನ್ಯಾಸಕ ಪು.ಗುರುಪ್ರಸಾದ್ ಭಟ್ ನಿರೂಪಿಸಿದರು. ಬಳಿಕ ಮಕ್ಕಳ ಕವಿಗೋಷ್ಟಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.