ಶ್ರೀ ಧೂಮಾವತೀ ದೈವಸ್ಥಾನ ಅಜಾರು, ಕಟೀಲು - ಡಿ.31 ರಿಂದ ಜ.2 ರ ತನಕ ವಾರ್ಷಿಕ ಜಾತ್ರಾ ಮಹೋತ್ಸವ
Monday, December 30, 2024
ಕಟೀಲು:ಶ್ರೀ ಧೂಮಾವತೀ ದೈವಸ್ಥಾನ ಅಜಾರು, ಕಟೀಲು ಇಲ್ಲಿನ ವಾರ್ಷಿಕ ಜಾತ್ರಾ ಮಹೋತ್ಸವವು ಡಿ. 31 ಮಂಗಳವಾರದಿಂದ ಜ.1 ಗುರುವಾರದ ತನಕ ವಿಜೃಂಭಣೆಯಿಂದ ಜರಗಲಿದೆ.ಡಿ.
31 ರ ಮಂಗಳವಾರ ರಾತ್ರಿ 8:30ಕ್ಕೆ ಧ್ವಜಾರೋಹಣ ನಡೆಯಲಿದೆ.ಜ.
1 ಬುಧವಾರ ಮಧ್ಯಾಹ್ನ 12:30 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ರಾತ್ರಿ 9 ಗಂಟೆಗೆ ಮಹಿಷಂದಾಯ ದೈವದ ನೇಮೋತ್ಸವ , ರಾತ್ರಿ 10 ಗಂಟೆಗೆ ಶ್ರೀ ಧೂಮಾವತಿ ಬಂಟ ದೈವಗಳ ನೇಮೋತ್ಸವ,ಜ.2 ಗುರುವಾರ ಸಂಜೆ 5:00 ಗಂಟೆಗೆ ಮಾಯಂದಾಲ್ ದೈವದ ನೇಮೋತ್ಸವವು ಜರಗಲಿದೆ.
ಭಕ್ತಾಭಿಮಾನಿಗಳು ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ದೈವದ ಸಿರಿಮುಡಿ ಗಂಧಪ್ರಸಾಧವನ್ನು ಸ್ವೀಕರಿಸಿ ಬಂಟ ಸಹಿತ ಧೂಮಾವತೀ ದೈವಗಳ ಕೃಪೆಗೆ ಪಾತ್ರರಾಗಿ ಎಂದು ಪ್ರಕಟಣೆ ತಿಳಿಸಿದೆ.