ಸಿಎ ಅಂತಿಮ ಪರೀಕ್ಷೆಯಲ್ಲಿ ಕೆ. ಎಸ್. ಶ್ರೀ ಗಣೇಶ ತೇರ್ಗಡೆ
Tuesday, December 31, 2024
ಕಟೀಲು: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐ.ಸಿ.ಎ.ಐ) ನವೆಂಬರ್ 2024ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಕೆ. ಎಸ್. ಶ್ರೀ ಗಣೇಶ ತೇರ್ಗಡೆಯಾಗಿದ್ದಾರೆ. ಇವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜಿನ ಹಳೇ ವಿದ್ಯಾರ್ಥಿಯಾಗಿದ್ದು, ಕಟೀಲು ನಿವಾಸಿ ಕೆ.ಎನ್.ಶ್ರೀನಿವಾಸ ರಾವ್ ಮತ್ತು ಜಯಶ್ರೀ ರಾವ್ ದಂಪತಿಯ ಪುತ್ರ, ಇವರು ಮಂಗಳೂರು ಕೆ.ಜಿ.ರಾವ್ & ಕೋ. ಸಂಸ್ಥೆಯ ಸಿಎ ಗಣೇಶ್ ಕೆ. ರಾವ್ ಅವರ ಮಾರ್ಗದರ್ಶನದಲ್ಲಿ ಆರ್ಟಿಕಲ್ ಶಿಪ್ ತರಬೇತಿ ಪೂರೈಸಿದ್ದರು.