ಕನಸಿನ ಆರೋಗ್ಯ ಸಂಜೀವಿನೀ ಯೋಜನೆ, ವಿಶೇಷ ಅನುದಾನ ಪ್ರದಾನ
Tuesday, December 31, 2024
ಕಟೀಲು:ರೋಟರಿ ಜಿಲ್ಲೆ 3181 ಇದರ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರ ಕನಸಿನ ಆರೋಗ್ಯ ಸಂಜೀವಿನೀ ಯೋಜನೆಯಡಿಯ ವಿಶೇಷ ಅನುದಾನ ಪ್ರದಾನ ಶನಿವಾರ ನಡೆಯಿತು.ಕಟೀಲು ಸಂಜೀವನೀ ಮಣಿಪಾಲ ಆಸ್ಪತ್ರೆ ಯ ಡಯಾಲಿಸಿಸ್ ಫಲಾನುಭವಿಗಳಿಗೆ ವಿವಿಧ ರೋಟರಿ ಸಂಸ್ಥೆಗಳ ಸಹಯೋಗದೊಂದಿಗೆ ನೀಡಲಾಗುವ ಆರ್ಥಿಕ ನೆರವನ್ನು ಆಸ್ಪತ್ರೆಯ ವೈದ್ಯರಾದ ಡಾ.ಕೌಶಿಕ್ ರವರಿಗೆ ವಿಕ್ರಂ ದತ್ತ ಹಸ್ತಾಂತರಿಸಿದರು.ಕಟೀಲು ದೇವಳದ ಅನುವಂಶಿಕ ಅರ್ಚಕರಾದ ಹರಿನಾರಾಯಣ ಆಸ್ರಣ್ಣ,ಮೊದಲ ತಿಂಗಳ ನೆರವು ಪ್ರಾಯೋಜಕರಾದ ಕಿನ್ನಿಗೋಳಿ ರೋಟರಿ ಅಧ್ಯಕ್ಷ ಧನಂಜಯ ಶೆಟ್ಟಿಗಾರ್ ,ಸದಸ್ಯರು,ಕಾರ್ಯದರ್ಶಿ ಶೆಟ್ಟಿಗಾರ್,ಸಹಾಯಕ ಗವರ್ನರ್ ಶರತ್ ಶೆಟ್ಟಿ,ಬಜಪೆ ರೋಟರಿ ಅಧ್ಯಕ್ಷ ಜೋಕಿಂ,ಮುಲ್ಕಿ ರೋಟರಿ ಅಧ್ಯಕ್ಷ ಪ್ರೀತಮ್,ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ನಿತೇಶ್ ಶೆಟ್ಟಿ,ಪ್ರೀತೇಶ್ ಮತ್ತಿತರರಿದ್ದರು.