ಅತ್ಲೆಟಿಕ್ಸ್ ನಲ್ಲಿ ಅನ್ಸ್ ಪಕ್ಕಳ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
Tuesday, December 24, 2024
ಕೈಕಂಬ : ಚೈನ್ನೈಯಲ್ಲಿ ಡಿ. 22ರಂದು ನಡೆದ ರೋವರ್ಸ್ ರಾಷ್ಟ್ರೀಯ ಅತ್ಲೆಟಿಕ್ ಕೂದಲ್ಲಿ 9 ವರ್ಷದ ವಯೋಮಿತಿಯ 50 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ 100 ಮೀಟರ್ ಓಟದಲ್ಲಿ ಕಂಚಿನ ಪದಕ ಗಳಿಸಿರುವ ಅನ್ಶ್ ಕೆ. ಪಕ್ಕಳ ಪೆರ್ಮಂಕಿಗುತ್ತು ಅವರು ದುಬೈಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಅತ್ಲೆಟಿಕ್ ಕೂಟಕ್ಕೆ ಆಯ್ಕೆಯಾಗಿದ್ದಾರೆ.
ಮಂಗಳೂರು ಅಶೋಕನಗರದ ಎಸ್‍ಡಿಎಂ ಸ್ಕೂಲ್‍ನಲ್ಲಿ 4ನೇ ತರಗತಿಯಲ್ಲಿ ಕಲಿಯುತ್ತಿರುವ ಈತ ದಿನೇಶ್ ಕುಂದರ್ ಅವರಿಂದ ಅತ್ಲೆಟಿಕ್ಸ್‍ನಲ್ಲಿ ತರಬೇತಿ ಪಡೆಯುತ್ತಿದ್ದು, ಪೆರ್ಮಂಕಿಗುತ್ತು ಕಿರಣ್ ಪಕ್ಕಳ ಮತ್ತು ಮೂಲ್ಕಿ ಪಂಜಿನಡ್ಕ ದಾಕ್ಷಾಯಿಣಿ ಕೆ. ಪಕ್ಕಳ ದಂಪತಿಯ ಪುತ್ರನಾಗಿದ್ದಾನೆ.