ಬಿಲ್ಲವ ಸಮಾಜ ಸೇವಾ ಸಂಘ (ರಿ)ಕಟೀಲು,ಬ್ರಹ್ಮಶ್ರೀ ನಾರಾಯಣ ಗುರುಗಳ ನೂತನ ಮಂದಿರದ ಲೋಕಾರ್ಪಣೆ ,ಬಿಂಬಪ್ರತಿಷ್ಠೆ ಹಾಗೂ ಕುಂಭಾಭಿಷೇಕ
Saturday, December 21, 2024
ಕಟೀಲು: ಬಿಲ್ಲವ ಸಮಾಜ ಸೇವಾ ಸಂಘ (ರಿ)ಕಟೀಲು ಇಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ನೂತನ ಮಂದಿರದ ಲೋಕಾರ್ಪಣೆ ,ಬಿಂಬಪ್ರತಿಷ್ಠೆ ಹಾಗೂ ಕುಂಭಾಭಿಷೇಕವು ಡಿ.25ರ ಬುಧವಾರಂದು ಕೇರಳ ವರ್ಕಳ ಶಿವಗಿರಿ ಮಠದ ಶ್ರೀಮನೋಜ್ ತಂತ್ರಿಯವರ ಉಪಸ್ಥಿತಿಯಲ್ಲಿ ಹೆಜಮಾಡಿಯ ಮಹೇಶ ಶಾಂತಿಯವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ.ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಡಿ.22 ರ ಸಂಜೆ 3ಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿಯ ಮೆರವಣಿಗೆ ಮತ್ತು ಹೊರೆಕಾಣಿಕೆ ಸಮರ್ಪಣೆ,ಡಿ.23 ರಂದು ಮಧ್ಯಾಹ್ನ 2:05 ಕ್ಕೆ ನೂತನ ಬಿಂಬ ಆಲಯ ಪ್ರತಿಷ್ಠೆ,ಋತ್ವಿಜರ ಆಗಮನ,ಆಲಯ ಪರಿಗೃಹ,ಪುಣ್ಯಾಹ,ಉಗ್ರಾಣ ಮುಹೂರ್ತ,ತೋರಣ ಮುಹೂರ್ತ, ಭದ್ರ ದೀಪ ಪೂಜೆ, ಸಾಮೂಹಿಕ ಪ್ರಾರ್ಥನೆ ನಾಂದಿ,ಗುರು ಗಣಪತಿ ಪೂಜೆ,ಸಪ್ತ ಶುದ್ದಿ,ರಾಕ್ಷೋಘ್ನ ವಾಸ್ತುಹೋಮಬಲಿ,ಬಿಂಭಾದಿವಾಸ.ಡಿ.24ರಂದು ಬೆಳಿಗ್ಗೆ ಗುರುಪೂಜೆ,ಗಣಹೋಮ,ಭಗವತಿ ಸೇವೆ,ಶಾಂತಿಹೋಮ,ತತ್ವ ಹೋಮಾದಿಗಳು,ರುದ್ರ ಹೋಮ ಹಾಗೂ ಡಿ 25 ರಂದು ಬೆಳಿಗ್ಗೆಪುಣ್ಯಾಹ ,ಗಣಹೋಮ,ಭಗವತಿ ಸೇವೆ,ನವಕ ಪ್ರಧಾನ ಹೋಮ,ಅಭಿಷೇಕ,ಅಲಂಕಾರ ಪೂಜೆ,ಪಾದ ಪೂಜೆ ಭಜನೆ ,ಮಹಾ ಮಂಗಳಾರತಿ ,ಪ್ರಾರ್ಥನೆ ,ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆಯ ನಡೆಯಲಿರುವುದು.
ಡಿ.25 ರ ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬೆಂಗಳೂರು ಆರ್ಯ ಈಡಿಗ ಮಹಾಸಂಸ್ಥಾನ ಸೋಲೂರು ಮಠದ ಫೀಠಾಧಿಪತಿ ಶ್ರೀ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರು ಆಶೀರ್ವಚನ ವನ್ನು ನೀಡಲಿದ್ದಾರೆ.ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.ಪಕ್ಷಿಕೆರೆ ಶ್ರೀಕೊರ್ದಬ್ಬು ದೈವಸ್ಥಾನದ ಆಡಳಿತ ಮೊಕ್ತೇಸರ ಸೀನ ಸ್ವಾಮಿಯವರು ದೀಪ ಪ್ರಜ್ವಲನೆಗೊಳಿಸಲಿದ್ದಾರೆ.ಹೆಜಮಾಡಿಯ ಮಹೇಶ ಶಾಂತಿಯವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.ಕಾರ್ಯಕ್ರಮದಲ್ಲಿ ದ.ಕ ಸಂಸದ ಕ್ಯಾ.ಬೃಜೇಶ್ ಚೌಟ,ಉಡುಪಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ,ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್,ಮಾಜಿ ಸಚಿವ ಅಭಯಚಂದ್ರ ಜೈನ್ ,ಮಾಜಿ ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ,ಕುದ್ರೋಳಿ ಶ್ರೀ ಗೋಕರ್ಣ ಕ್ಷೇತ್ರದ ಅಧ್ಯಕ್ಷ ಎಚ್.ಎಸ್ ಸಾಯಿರಾಮ್ ,ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಡಾ.ರಾಜಶೇಖರ ಕೋಟ್ಯಾನ್, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಗೀತಾಂಜಲಿ ಸುವರ್ಣ,ಬಿರುವೆರ್ ಕುಡ್ಲ ಬಲ್ಲಾಲ್ ಬಾಗ್ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ,ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ್ ನಾಣಿಲ್ ,ಮಂಗಳೂರು ಗಣೇಶ್ ಎಲೆಕ್ಟ್ರಿಕಲ್ಸ್ ನ ಮಾಲಕ ಎಂ.ಸೀತಾರಾಮ್ ,ಕಟೀಲ್ ಶ್ರೀ ಡೆವಲಪರ್ಸ್ ನ ಗಿರೀಶ್ ಶೆಟ್ಟಿ,ತಾಳಿಪಾಡಿ ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಮಿತಿ ಅಧ್ಯಕ್ಷ ಕುಶಲ ಪೂಜಾರಿ,ಗೋಪಾಲ ಪೂಜಾರಿ ಗುತ್ತಕಾಡು,ಶ್ರೀಮತಿ ಪ್ರೀತಿ ಉದಯ್ ಕುಮಾರ್ ಹಾಗೂ ಮತ್ತಿತರರು ಉಪಸ್ಥಿತಲಿರುವರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಡಿ.25 ರಂದು ಸಂಜೆ 6 ಕ್ಕೆ ರಾಜ್ಯ ಪ್ರಶಸ್ತಿ ವಿಜೇತ ಥಂಡರ್ ಗೈಸ್ ಫೌಂಢೇಶನ್ ಬಜ್ಪೆ ಇವರಿಂದ ಸೂರಜ್ ಶೆಟ್ಟಿ ನಿರ್ದೇಶನದ ಕ್ಷೇತ್ರ ಪುರಾಣ ಮಂಜರಿ ಭಕ್ತಿಭಾವದ ನೃತ್ಯ ಸಂಗಮ ಹಾಗೂ ರಾತ್ರಿ 8:30 ರಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾ ಕುಂಭ ಕುಳಾಯಿ ಅರ್ಪಿಸುವ ತುಳು ನಾಟಕ ಪರಮಾತ್ಮೆ ಪಂಜುರ್ಲಿ ನಡೆಯಲಿದೆ.