ಕಿನ್ನಿಗೋಳಿ ಬಸ್ ಚಾಲಕರ - ನಿರ್ವಾಹಕರ ಸಂಘದ 12 ನೇ ವಾರ್ಷಿಕೋತ್ಸವ
Saturday, December 21, 2024
ಕಿನ್ನಿಗೋಳಿ:ಕಿನ್ನಿಗೋಳಿ ಬಸ್ ಚಾಲಕರ - ನಿರ್ವಾಹಕರ ಸಂಘದ 12 ನೇ ವಾರ್ಷಿಕೋತ್ಸವವು ಇಂದು ಸಂಜೆ 7 ಕ್ಕೆ ನಡೆಯಲಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಪೀಕರ್ ಯು.ಟಿ ಖಾದರ್ ಅವರು ವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ,ಶಾಸಕ ಉಮಾನಾಥ ಕೋಟ್ಯಾನ್ ,ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜಾ,ಪಣಂಬೂರು ವಿಭಾಗದ ಪೊಲೀಸ್ ಉಪ ಆಯುಕ್ತ ಕೆ.ಶ್ರೀಕಾಂತ್,ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಇಂದು,ಉದ್ಯಮಿ ಸಂತೋಷ್ ಕುಮಾರ್ ಹೆಗ್ಡೆ,ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್,ಮಾಜಿ ತಾ ಪಂ ಸದಸ್ಯ ದಿವಾಕರ ಕರ್ಕೇರ,ಕಿನ್ನಿಗೋಳಿ ಯುಗಪುರುಷದ ಕೆ.ಭುವನಾಭಿರಾಮ ಉಡುಪ,ಬಸ್ ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ ಹಾಗೂ ಗಣ್ಯಾತೀಗಣ್ಯರು ಉಪಸ್ಥಿತಲಿರುವರು.
ಕಾರ್ಯಕ್ರಮದಲ್ಲಿ ಬೈಕಂಪಾಡಿ ಟ್ರಾಪಿಕ್ ಪೊಲೀಸ್ ಯೋಗೇಶ್ ಎಸ್ ಅರ್ ,ಮೂಲ್ಕಿ ಠಾಣೆಯ ಎಎಸ್ಐ ಸಂಜೀವ ಎಪಿ,10 ಜನ ಬಸ್ ಚಾಲಕರು ಹಾಗೂ ನಿರ್ವಾಹಕರಿಗೆ ಸನ್ಮಾನ ನಡೆಯಲಿದೆ ಎಂದು ಅಧ್ಯಕ್ಷ ಸಂದೀಪ್ ಅಂಚನ್ ತಿಳಿಸಿದ್ದಾರೆ.ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ತುಳು ನಾಟಕ ನಡೆಯಲಿದೆ.