ಕಟೀಲು ಮೇಳಗಳ ಕಲಾವಿದರಿಗೆ ಅಪಘಾತವಿಮೆ
Sunday, December 15, 2024
ಕಟೀಲು : ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ 18 ರಿಂದ 65 ವರ್ಷ ಒಳಗಿನ ಕಲಾವಿದರಿಗೆ
ರೂ 10 ಲಕ್ಷ ಕವರೇಜ್ ಅಪಘಾತ ವಿಮೆ ಹಾಗೂ 65 ರಿಂದ 70 ವರ್ಷ ಒಳಗಿನ ಕಲಾವಿದರಿಗೆ ಉಳಿತಾಯ ಖಾತೆ ಜೊತೆಗೆ ರೂ. 2 ಲಕ್ಷ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಮಾಡಿ ಕೊಡಲಾಯಿತು. ಕಟೀಲು ಮೇಳಗಳ ಕಲಾವಿದರು ಮತ್ತು ಕೆಲಸಗಾರರ ಶ್ರೇಯೋಭಿವೃದ್ಧಿ ಸಮಿತಿಯಿಂದ ಉಚಿತವಾಗಿ ಅಪಘಾತವಿಮೆ ಮಾಡಿಕೊಡಲಾಯಿತು. ಸತತ ಮೂರನೇ ವರ್ಷ ಈ ವಿಮೆಯನ್ನು ಮಾಡಿಕೊಡಲಾಗಿದೆ.
ಕಟೀಲು ಅಂಚೆ ಕಛೇರಿ ಅಂಚೆ ಪಾಲಕ ಕುಮಾರ್, ಇಲಾಖೆಯ ಸುಭಾಷ್ ಪಿ. ಸಾಲಿಯಾನ್
ದಯಾನಂದ ಜಿ ಕತ್ತಲ್ ಸಾರ್, ಅವಿನಾಶ್, ಗುರುರಾಜ್, ಹೇಮಚಂದ್ರ ಸಹಕರಿಸಿದರು.
ಸಮಿತಿಯು ಕಲಾವಿದರು ಅನಾರೋಗ್ಯಕ್ಕೀಡಾದಾಗ ಔಷಧಿಯ ವೆಚ್ಚವನ್ನು ತಿರುಗಾಟದ ಅವಧಿಯಲ್ಲಿ ಮೇಳದ ವತಿಯಿಂದಲೇ ನೀಡಲಾಗುತ್ತಿದೆ. ಮಳೆಗಾಲದಲ್ಲಿ ರಜೆಯ ಅವಧಿಯಲ್ಲಿ ಗೌರವಧನ ನೀಡಲಾಗುತ್ತಿದೆ.