ಮೂಲಸೌಕರ್ಯ ಕೊರತೆ,ವಿಧಾನ ಪರಿಷತ್ ನ ಸದಸ್ಯ ಐವನ್ ಡಿಸೋಜ ಅವರಿಗೆ ಮನವಿ
Sunday, December 15, 2024
ಬಜಪೆ: ಇಲ್ಲಿನ ಸೌಹಾರ್ದ ನಗರದಲ್ಲಿನ ಮೂಲ ಸೌಕರ್ಯಗಳ ಕೊರತೆಯ ಬಗ್ಗೆ ಮಂಗಳೂರು ವಿಮಾನ ನಿಲ್ದಾಣದ ಪುನರ್ವಸತಿ ಕಾಲೋನಿಯ ಸ್ಥಳೀಯರು ಹಾಗೂ
ಬಜಪೆ ನಾಗರೀಕರ ಹಿತರಕ್ಷಣಾ ವೇದಿಕೆಯ ಸಂಚಾಲಕ ಸೀರಾಜ್ ಬಜ್ಪೆ ಅವರ ನೇತೃತ್ವದಲ್ಲಿ ವಿಧಾನ ಪರಿಷತ್ ನ ಸದಸ್ಯ ಐವನ್ ಡಿಸೋಜ ಅವರಿಗೆ ಮನವಿಯನ್ನು ನೀಡಿದರು.ಬಜ್ಪೆಯ ಸೌಹಾರ್ದ ನಗರದಲ್ಲಿ ನಿಸಾರ್ ಕರಾವಳಿ ರವರು ಭಾನುವಾರದಂದು ಆಯೋಜಿಸಿದ ಕರಾವಳಿ ಟ್ರೋಫಿ ಕ್ರಿಕೆಟ್ ಲೀಗ್ ಪಂದ್ಯಾಟದ ಉದ್ಘಾಟನೆಗೆ ವಿಧಾನ ಪರಿಷತ್ತಿನ ಸದಸ್ಯ ಐವನ್ ಡಿಸೋಜಾ ಅವರು ಆಗಮಿಸಿದ್ದರು. ಈ ವೇಳೆ ಮನವಿಯನ್ನು ನೀಡಿ ಪುನರ್ ವಸತಿ ಕಾಲೋನಿಯ ಅವ್ಯವಸ್ಥೆಯ ಬಗ್ಗೆ ತಿಳಿಸಿದ್ದು ,ಸೌಹಾರ್ದ ನಗರದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.ಈ ಸಂದರ್ಭದಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಹ ಸಂಚಾಲಕ ಇಸ್ಮಾಯಿಲ್ ಇಂಜಿನಿಯರ್ ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ,ಕರಾವಳಿ ಟೀಮ್ ಅಧ್ಯಕ್ಷ ನಿಸಾರ್ ಕರಾವಳಿ, ಜಿಲ್ಲಾ ರಾಜ್ಯೋತ್ಸ್ವ ಪ್ರಶಸ್ತಿ ಪುರಸ್ಕೃತ ಉದ್ಯಮಿ ರೊನಾಲ್ಡ್ ಫೆರ್ನಾಂಡಿಸ್ ,ಗ್ರಾ ಪಂ ಸದಸ್ಯರುಗಳಾದ ವಿಜಯ ಸುವರ್ಣ ,ಶಾಂತ ಕೊಳಂಬೆ , ಮಾಜಿ ಗ್ರಾ ಪಂ ಸದಸ್ಯರುಗಳಾದ ಜೇಕಬ್ ಪಿರೇರಾ ,ಖಾದರ್ ಏರ್ಪೋರ್ಟ್ ,ಅಶ್ರಫ್ , ಕೋರ್ದಬ್ಬು ದೇವಸ್ಥಾನದ ಗುರಿಕಾರ ಜಯಂತ್ ಮಾಸ್ಟರ್ ,ಸತೀಶ್ ಗಾರ್ಡನ್ ,ರಾಕೇಶ್ ಕುಂದರ್ ಕೊಳಂಬೆ, ಹಳೆ ವಿದ್ಯರ್ಥಿ ಸಂಘದ ಅಧ್ಯಕ್ಷ ನಾಗೇಶ್ ,ಹನೀಫ್ ಸುಂಕದಕಟ್ಟೆ ,ಮಸೀದಿಯ ಅಧ್ಯಕ್ಷ ಹಸನಬ್ಬ ,ಹನೀಫ್ ಹಿಲ್ ಟಾಪ್ ,ಕೆಪಿಸಿಸಿ ಸಾಮಾಜಿಕ ಜಾಲತಾಣದ ಹಫೀಜ್ ಕೊಳಂಬೆ ಹಾಗೂ ಗ್ರಾಮಸ್ಥರು ಇದ್ದರು.