-->


ಉರುಳಿಬಿದ್ದ ಕ್ರೇನ್,ಅಪರೇಟರ್ ಸಾವು

ಉರುಳಿಬಿದ್ದ ಕ್ರೇನ್,ಅಪರೇಟರ್ ಸಾವು

ಬಜಪೆ:ಬೃಹತ್ ಕ್ರೇನೊಂದು ಅಪರೇಟರ್ ನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ಮಂಗಳವಾರ ರಾತ್ರಿ  ಕೆಂಜಾರು ಬಳಿ ನಡೆದಿದೆ.ಘಟನೆಯಲ್ಲಿ ಉತ್ತರ ಪ್ರದೇಶದ  ಕ್ರೇನ್ ಅಪರೇಟರ್ ಗಂಭೀರವಾಗಿ ಗಾಯಗೊಂಡಿದ್ದು,ಚಿಕಿತ್ಸೆಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಅದ್ಯಪಾಡಿಯಿಂದ ಕೆಂಜಾರಿಗೆ ಬರುತ್ತಿದ್ದ ಕ್ರೇನ್ ಕೆಂಜಾರು ವಿಮಾನ ನಿಲ್ದಾಣದ ನಿರ್ಗಮನ ದ್ವಾರದ ಬಳಿ ಅಪರೇಟರ್ ನ ನಿಯಂತ್ರಣ ತಪ್ಪಿ ಸುಮಾರು 20 ಅಡಿ ಆಳದ ಕಮರಿಗೆ ಉರುಳಿ ಬಿದ್ದಿದೆ.ಉರುಳಿ ಬಿದ್ದ ಪರಿಣಾಮ ಕ್ರೇನ್ ಅಪರೇಟರ್ ಕ್ರೇನ್ ನ ಅಡಿ ಭಾಗದಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು.ಗಂಭೀರವಾಗಿ ಗಾಯಗೊಂಡ ಕ್ರೇನ್ ಅಪರೇಟರ್ ರನ್ನು ಕೂಡಲೇ  ಮಂಗಳೂರಿನ ಖಾಸಗಿ  ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು,ಚಿಕಿತ್ಸೆ ಫಲಕಾರಿಯಾಗದೆ  ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article