ಮಹಿಳೆಯ ಸರ ಕಳವು ,ಆರೋಪಿ ಆರೆಸ್ಟ್
Wednesday, December 18, 2024
ಬಜಪೆ:ಸ್ಕೂಟರ್ ನಲ್ಲಿ ಬಂದ ವ್ಯಕ್ತಿಯೊಬ್ಬ ವಿಳಾಸ ಕೇಳುವ ನೆಪದಲ್ಲಿ ತೆಂಕ ಎಡಪದವು ಗ್ರಾಮದ ಶಿಬ್ರಿಕೆರೆ ಗಣೇಶ್ ಮಿಲ್ ಬಳಿ ಇರುವ ಒಳ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಸರವನ್ನು ಎಳೆದು ಪರಾರಿಯಾದ ಘಟನೆ ಡಿ.12 ರಂದು ನಡೆದಿದ್ದು,ಈ ಬಗ್ಗೆ ಬಜಪೆ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿತ್ತು.ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಸಂದೀಪ್ ಜಿ ಎಸ್ ರವರು ಆರೋಪಿ ಹಾಗೂ ಸೊತ್ತು ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಿದ್ದು, ಆರೋಪಿಯನ್ನು ಪತ್ತೆ ಮಾಡಿ ಸುಮಾರು 70 ಸಾವಿರ ರೂ ಮೌಲ್ಯದ ಚಿನ್ನದ ಸರ,50 ಸಾವಿರ ರೂ ಮೌಲ್ಯದ ಸ್ಕೂಟರ್ ,ಸುಮಾರು 50 ಸಾವಿರ ರೂ ಮೌಲ್ಯದ ಆಟೋ ರಿಕ್ಷಾ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿಯನ್ನು ಹಳೆಯಂಗಡಿಯ ಇಂದಿರಾ ನಗರದ ನಿವಾಸಿ ಅಬ್ದುಲ್ ರವೂಫ್ (30) (ಆಟೋ ರವೂಫ್)ಎಂದು ಗುರುತಿಸಲಾಗಿದೆ.ಆರೋಪಿಯ ವಿರುದ್ದ ಮೂಡಬಿದಿರೆ,ಮೂಲ್ಕಿ,ಬಜಪೆ,ಉಪ್ಪಿನಂಗಡಿ ಹಾಗೂ ಹಾಸನ ಜಿಲ್ಲೆಯ ಅರೇಹಳ್ಳಿ ಪೊಲೀಸ್ ಠಾಣೆಗಳಲ್ಲಿ ಒಟ್ಟು 10 ಸುಲಿಗೆ ಮತ್ತು ಕಳವಿಗೆ ಸಂಬಂಧಿಸಿ ಪ್ರಕರಣ ದಾಖಲಾಗಿತ್ತು.ಸದ್ರಿ ಆರೋಪಿ 2 ತಿಂಗಳ ಹಿಂದೆಯಷ್ಠೆ ಜಾಮೀನು ಪಡೆದುಕೊಂಡಿದ್ದ ಎಂಬುದು ಪೊಲೀಸ್ ಮೂಲಗಳು ತಿಳಿಸಿದೆ.
ಪೊಲೀಸ್ ನಿರೀಕ್ಷಕ ಸಂದೀಪ್ ಜಿ.ಎಸ್ ರವರ ನೇತೃತ್ವದಲ್ಲಿ ಪಿಎಸ್ ಐ ರೇವಣಸಿದ್ದಪ್ಪ, ಪಿಎಸ್ಐ ಕುಮಾರೇಶನ್, ಪಿಎಸ್ಐ ಲತಾ, ಸಿಬ್ಬಂದಿಯವರಾದ ಸುಜನ್, ಮಂಜುನಾಥ, ರಶೀದ ಶೇಖ್, ಬಸವರಾಜ್ ಪಾಟೀಲ್, ಚಿದಾನಂದ, ಚಂದ್ರಕಾಂತ್, ಕೆಂಚಪ್ಪ, ಭರಮಾ ಬಡಿಗೇರ್, ದುರ್ಗಾ ಪ್ರಸಾದ, ಪ್ರೇಮ್ ಕುಮಾರ್, ವಿರುಪಾಕ್ಷ, ಪರಸಪ್ಪ, ಪ್ರಜ್ವಲ್ ಮತ್ತು ಇತರ ಸಿಬ್ಬಂದಿಗಳು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.